ಲೋಕಸಭಾ ಚುನಾವಣೆ | ರಾಜ್ಯದಲ್ಲಿ ‘ಇಂಡಿಯಾ ಬ್ಲಾಕ್ ಸಮನ್ವಯ ಸಮಿತಿ’ ರಚನೆ
ಬೆಂಗಳೂರು : ಲೋಕಸಭಾ ಚುನಾವಣೆಗೆ ಪೂರಕವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಮಟ್ಟದಲ್ಲಿ ಕೆಪಿಸಿಸಿಯ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ‘ಇಂಡಿಯಾ ಬ್ಲಾಕ್ ಸಮನ್ವಯ ಸಮಿತಿ’ಯನ್ನು ರಚಿಸಿದೆ.
ಸಮಿತಿಯ ಸಂಚಾಲಕರಾಗಿ ಕೆಪಿಸಿಸಿಯ ಮಾದ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬುರನ್ನು ನೇಮಿಸಲಾಗಿದೆ. ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಎಂ ಕಾರ್ಯದರ್ಶಿ ಬಸವರಾಜು, ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನೀ ಸಮಿತಿಯ ಸದಸ್ಯರಾಗಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಮಂಜಪ್ಪ ಯಾದವ್, ಡಿಎಂಕೆ ಕಾರ್ಯದರ್ಶಿ ರಾಮಸ್ವಾಮಿ ನಟೇಶನ್, ಎನ್ಸಿಪಿ (ಶರದ್ ಪವಾರ್) ಅಧ್ಯಕ್ಷ ಸಿ.ಎಸ್. ಇನಾಮ್ಹಾರ್, ಸಿಪಿಐ(ಎಂಎಲ್)ನ ಕಾರ್ಯದರ್ಶಿ ಕ್ಲಿಪ್ಪನ್ ಡಿ.ರೊಜೆರಿಯೋ, ಫಾರ್ವರ್ಡ್ಬ್ಲಾಕ್ನ ಕಾರ್ಯದರ್ಶಿ ಶಿವಶಂಕರ್ ಜಿ.ಆರ್., ಐಯುಎಂಎಲ್ನ ಅಧ್ಯಕ್ಷ ಜಾವಿದುಲ್ಲಾ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.
Next Story