ನಿಮ್ಮ ಫೋನ್ ಕಳೆದುಹೋಗಿದೆಯೇ? ಬ್ಲಾಕ್ ಮಾಡಲು ಏನು ಮಾಡಬೇಕು?
ಬಿಡುಗಡೆಯಾಗಿದೆ ರಾಜ್ಯ ಸರಕಾರದ ಹೊಸ ಆ್ಯಪ್
ಬೆಂಗಳೂರು: ನಿಮ್ಮ ಮೊಬೈಲ್ ಕಳುವಾಗಿದ್ದರೆ ಇಲ್ಲವೇ ಕಳೆದು ಹೋಗಿದ್ದರೆ, ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲು ʼಕರ್ನಾಟಕ ಪೊಲೀಸ್ ಇಲಾಖೆʼ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಆಪ್( KSP Application ) ಬಳಸಿಕೊಳ್ಳಬಹುದು. ಸರಳವಾಗಿ ಕಳೆದು ಹೋದ ನಿಮ್ಮ ಮೊಬೈಲ್ ಬ್ಲಾಕ್ ಮಾಡಲು ಅವಕಾಶವಿದೆ.
ಕಳುವಾದ ಇಲ್ಲವೇ ಕಳೆದು ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡುವ ಕುರಿತು ಬೆಂಗಳೂರು ನಗರ ಪೊಲೀಸರು ಜಾಗೃತಿ ಸಂದೇಶವನ್ನು ಎಕ್ಸ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ನೋಂದಣಿ ಹೇಗೆ ಎನ್ನುವ ಮಾಹಿತಿಯನ್ನು ಒದಗಿಸಿದ್ದಾರೆ.
ನಿಮ್ಮ ಮೊಬೈಲ್ ಕಳೆದುಹೋದಾಗ ನಿಮ್ಮ ಬಳಿ ಇನ್ನೊಂದು ಮೊಬೈಲ್ ಇದ್ದರೆ ಅಥವಾ ಸ್ನೇಹಿತರ, ಕುಟುಂಬದವರ ಮೊಬೈಲ್‌ನಲ್ಲಿ KSP ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕ್ಕೊಳ್ಳಬೇಕು. ನಂತರ ಅದರಲ್ಲಿ ಈ ನಂಬರ್ ಅಥವಾ ಈ ಮೊಬೈಲ್ ಅನ್ನು ಬ್ಲಾಕ್ ಮಾಡಿ ಎಂದು ದೂರು ದಾಖಲಿಸಬಹುದು.
ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ...
1. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ KSP Application ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ.
2. ಮೊಬೈಲ್ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್ ಮಾಡಿಕೊಳ್ಳಿ. ಅಲ್ಲಿಂದ E-Lost ಆಪ್ಠನ್ ಅನ್ನು ಆಯ್ಕೆ ಮಾಡಿಕೊಳ್ಳಿ.
3. ಆನಂತರ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್ ಅನ್ನು ಆಯ್ಕೆ ಮಾಡಿರಿ.
4. ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್ ನಂಬರ್ ಹಾಗೂ ಸಾಧ್ಯವಾದರೆ ಇ ಮೇಲ್ ಐಡಿ ನೊಂದಾಯಿಸಿರಿ. ನಂತರ ಮುಂದಿನ ಆಪ್ಶನ್ ಆಯ್ಕೆ ಮಾಡಿಕೊಳ್ಳಿರಿ
5. ನಿಮ್ಮ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ಮುಂದಿನ ಆಪ್ಶನ್ ಅನ್ನು ಆಯ್ಕೆ ಮಾಡಿರಿ.
6. ಇದಾದ ಬಳಿಕ ಮೊಬೈಲ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿ.
7. ಇದಾದ ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ. ಬಳಿಕ ಆಡ್ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.
8. ಕೊನೆಗೆ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ. ಕಳೆದು ಹೋದ ಬಗೆಯ ಬಗ್ಗೆ ಮಾಹಿತಿಯನ್ನು ದಾಖಲಿಸಿ ನಂತರ ಸಬ್ಮಿಟ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿರಿ. ನಿಮಗೆ ಅದರಲ್ಲಿಯೇ ರಶೀದಿಯೂ ಬರಲಿದೆ. ಅದನ್ನು ಡೌನ್ ಲೋನ್ ಮಾಡಿ ಇಟ್ಟುಕೊಳ್ಳಿರಿ.