ನಾಳೆಯಿಂದ(ಫೆ.9) ಮೆಟ್ರೋ ಪ್ರಯಾಣ ದರ ಹೆಚ್ಚಳ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಮೆಟ್ರೋ ಪ್ರಯಾಣ ದರ ನಿಗದಿ ಸಮಿತಿ ಶಿಫಾರಸ್ಸಿನ ಮೇರೆಗೆ ನಾಳೆಯಿಂದ(ಫೆ.9) ಮೆಟ್ರೋ ಪ್ರಯಾಣದ ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಅಧಿಕೃತ ಆದೇಶ ಹೊರಡಿಸಿದೆ.
ಶನಿವಾರ ಈ ಕುರಿತಾಗಿ ಮಾಹಿತಿ ನೀಡಿರುವ ಬಿಎಂಆರ್ಸಿಎಲ್, ಮೆಟ್ರೋ ರೈಲ್ವೆ 2002ರ ಸೆಕ್ಷನ್ 34 ಕಾಯ್ದೆ ಅಡಿಯಲ್ಲಿ ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನ ಮೇರೆಗೆ ನಾಳೆ(ಫೆ.9) ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ದರ ಪರಿಷ್ಕರಣೆಯನ್ನು ಮೆಟ್ರೋ ಸಂಸ್ಥೆಯ ಆರ್ಥಿಕ ಸುಸ್ಥಿರತೆ ಮತ್ತು ಪ್ರಯಾಣಿಕರಿಗೆ ಬೆಲೆ ಕೈಗೆಟುಕುವಂತಿರಬೇಕೆನ್ನುವ ದೃಷ್ಟಿಯಲ್ಲಿ ಸಮತೋಲನ ಕಾಯ್ದುಕೊಂಡು ಟಿಕೆಟ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಮೆಟ್ರೋ ಸಂಸ್ಥೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಮೆಟ್ರೋ ಸ್ಮಾರ್ಟ್ ಕಾರ್ಡ್ಗಳಿಗೆ ನೀಡಲಾಗುತ್ತಿದ್ದ ಶೇ.5ರಷ್ಟು ರಿಯಾಯಿತಿ ಮುಂದುವರಿಸಲಾಗಿದೆ. ಆದರೆ, ಆದರೆ ಸ್ಮಾರ್ಟ್ ಕಾರ್ಡ್ನಲ್ಲಿ ಕನಿಷ್ಟ ಹಣವನ್ನು 90 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ಪ್ರತಿ ರವಿವಾರ ಮತ್ತು ರಾಷ್ಟ್ರೀಯ ರಜಾ ದಿನಗಳಂದು ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಮೊದಲು ಕನಿಷ್ಠ 10ರಿಂದ ಗರಿಷ್ಠ 60 ರೂ.ವರೆಗೆ ಟಿಕೆಟ್ ದರ ಇತ್ತು. ಈಗ ದರ ಪರಿಷ್ಕರಣೆಯಿಂದ ಕನಿಷ್ಠ 10 ರಿಂದ 90 ರೂ.ವರೆಗೆ ಏರಿಸಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪರಿಷ್ಕೃತ ದರ ಪಟ್ಟಿ:
ದೂರ(ಕಿ.ಮೀ.) - ಪರಿಷ್ಕೃತ ದರ
0-2 ಕಿ.ಮೀ. ಪ್ರಯಾಣಕ್ಕೆ 10 ರೂ. ಏರಿಕೆ
2-4 ಕಿ.ಮೀ. ಪ್ರಯಾಣಕ್ಕೆ 20 ರೂ. ಏರಿಕೆ
4-6 ಕಿ.ಮೀ. ಪ್ರಯಾಣಕ್ಕೆ 30 ರೂ. ಏರಿಕೆ
6-8 ಕಿ.ಮೀ. ಪ್ರಯಾಣಕ್ಕೆ 40 ರೂ. ಏರಿಕೆ
8-10 ಕಿ.ಮೀ. ಪ್ರಯಾಣಕ್ಕೆ 50 ರೂ. ಏರಿಕೆ
10-15 ಕಿ.ಮೀ. ಪ್ರಯಾಣಕ್ಕೆ 60 ರೂ. ಏರಿಕೆ
15-20 ಕಿ.ಮೀ. ಪ್ರಯಾಣಕ್ಕೆ 70 ರೂ. ಏರಿಕೆ
20-25 ಕಿ.ಮೀ. ಪ್ರಯಾಣಕ್ಕೆ 80 ರೂ. ಏರಿಕೆ
25-30 ಕಿ.ಮೀ. ಪ್ರಯಾಣಕ್ಕೆ 90 ರೂ. ಏರಿಕೆ
30 ಕಿ.ಮೀ.ಕ್ಕಿಂತ ಹೆಚ್ಚಿನ ಪ್ರಯಾಣಕ್ಕೆ ಟಿಕೆಟ್ ದರ 90 ರೂ. ಏರಿಕೆ