ಪ್ರಧಾನಿ ಮೋದಿಯವರ ಮಾತು-ಮೌನವನ್ನು ಪಟ್ಟಿ ಮಾಡಿದ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಪ್ರಧಾನಿ ಮೋದಿ ಅವರು ಯಾವಾಗ ಮೌನವಾಗಿರುತ್ತಾರೆ, ಯಾವಾಗ ಮಾತನಾಡುತ್ತಾರೆ ಎಂಬ ಬಗ್ಗೆ ಆರೋಗ್ಯ
ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರ ಮೌನ ಹಾಗೂ ಮಾತನಾಡುವ ಸಂದರ್ಭಗಳನ್ನು ಪಟ್ಟಿ ಮಾಡಿದ್ದಾರೆ.
ಮೋದಿಯವರು ಮೌನವಾಗುವ ಸಂದರ್ಭಗಳು.
* ಗಲಭೆಗಳಾದಾಗ
* ಸಾಮೂಹಿಕ ನರಮೇಧಗಳಾಗುವಾಗ
* ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ
* ಬೆಲೆಯೇರಿಕೆಯಾದಾಗ
* PMCares ಫಂಡ್ ಬಗ್ಗೆ ಕೇಳಿದಾಗ
* 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ
* ಕಪ್ಪುಹಣದ ಬಗ್ಗೆ ಕೇಳಿದಾಗ
* ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ.
ಮೋದಿಯವರು ಮಾತನಾಡುವ ಸಂದರ್ಭಗಳು.
* ಚುನಾವಣೆ ಬಂದಾಗ
* ಪ್ರಚಾರಕ್ಕೆ ಕರೆದಾಗ
* ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ
* ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ
* ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದ್ದಾರೆ.