‘ಪೌರ ಕಾರ್ಮಿಕರ ವಿದೇಶ ಪ್ರವಾಸ’ಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ
ಬೆಂಗಳೂರು, ನ.20: ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರಿಗೆ ವಿದೇಶದಲ್ಲಿನ ಸಚ್ಛತಾ ನಿರ್ವಹಣಾ ಅಧ್ಯಯನದ ಎರಡನೆ ಬ್ಯಾಚ್‍ನ ವಿದೇಶ ಪ್ರವಾಸ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೋಮವಾರ ವಿಧಾನಸೌಧದ ಭವ್ಯ ಮೆಟ್ಟಿಲು ಬಳಿ ಚಾಲನೆ ನೀಡಿದರು.
ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯ 37 ಸಫಾಯಿ ಕರ್ಮಚಾರಿ, ಪೌರಕಾರ್ಮಿಕರು ಸಿಂಗಾಪುರದಲ್ಲಿ ಸ್ವಚ್ಚತಾ ನಿರ್ವಹಣಾ ಕ್ರಮಗಳ ಕುರಿತು ವಿದೇಶ ಪ್ರವಾಸದ ಕಾರ್ಯಕ್ರಮದಲ್ಲಿ ಅಧ್ಯಯನ ನಡೆಸಲಿದ್ದಾರೆ.
ಮೂರು ದಿನಗಳ ಕಾಲ ಸಿಂಗಾಪುರದಲ್ಲಿ ಸ್ವಚ್ಚತಾ ನಿರ್ವಹಣಾ ಅಧ್ಯಯನ ನಡೆಸಿದ ಬಳಿಕ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು ರಾಜ್ಯಕ್ಕೆ ಹಿಂದಿರುಗಲಿದ್ದು, ತದನಂತರ ಹಂತ ಹಂತವಾಗಿ ಏಳು ಬ್ಯಾಚ್ ಗಳಲ್ಲಿ ಸ್ವಚ್ಚತಾ ನಿರ್ವಹಣಾ ಅಧ್ಯಯನದ ವಿದೇಶ ಪ್ರವಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story