ಸುದ್ದಿ ನಿರೂಪಣೆಯಲ್ಲಿ ‘ಪಾಕಿಸ್ತಾನದ ಧ್ವಜ’ ಬಳಕೆ | ಸುದ್ದಿ ವಾಹಿನಿಯ ವಿರುದ್ಧ ಕಠಿಣ ಕ್ರಮ : ಸಚಿವ ಎಚ್.ಸಿ.ಮಹದೇವಪ್ಪ
ಬೆಂಗಳೂರು : ಪಾಕಿಸ್ತಾನದ ಧ್ವಜ ಬಳಸಿ ಭಾರತೀಯ ಪ್ರಜೆಗಳನ್ನು ಧರ್ಮದ ಆಧಾರದಲ್ಲಿ ಅವಮಾನಿಸಿರುವ ಸುವರ್ಣ ಸುದ್ಧಿವಾಹಿನಿಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪಾಕಿಸ್ತಾನದ ಧ್ವಜ ಬಳಸಿ ಭಾರತೀಯ ಪ್ರಜೆಗಳನ್ನು ಧರ್ಮದ ಆಧಾರದಲ್ಲಿ ಅವಮಾನಿಸಿ, ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಸುವರ್ಣ ಸುದ್ದಿ ವಾಹಿನಿಯ ವಿರುದ್ಧ ಕ್ರಮ ಜರುಗಿಸಲಾಗುವುದು. ಪ್ರಜಾಪ್ರಭುತ್ವದ 4ನೆ ಅಂಗವಾದ ಮಾಧ್ಯಮವೇ ಸಂವಿಧಾನದ ಆಶಯಗಳನ್ನು ಮರೆತು ಕೂತಿರುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ’ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಧ್ವಜ ಬಳಸಿ ಭಾರತೀಯ ಪ್ರಜೆಗಳನ್ನು ಧರ್ಮದ ಆಧಾರದಲ್ಲಿ ಅವಮಾನಿಸಿ, ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ @AsianetNewsSN ಸುದ್ದಿ ವಾಹಿನಿಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.ಪ್ರಜಾಪ್ರಭುತ್ವದ 4 ನೇ ಅಂಗವಾದ ಮಾಧ್ಯಮವೇ ಸಂವಿಧಾನದ ಆಶಯಗಳನ್ನು ಮರೆತು ಕೂತಿರುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ pic.twitter.com/redHTMZw2A
— Dr H C Mahadevappa(Buddha Basava Ambedkar Parivar) (@CMahadevappa) May 11, 2024