ಮಡಿಕೇರಿ | ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ; ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಸಂಬಂಧಿ ಅಪಘಾತದಲ್ಲಿ ಮೃತ್ಯು
ಸಿಲ್ವಿನ್ ಡಿಸೋಝ | ಪೌಲ್ ಡಿಸೋಝ
ಮಡಿಕೇರಿ ನ.3 : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಇವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಸಂಬಂಧಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆಯೊಂದು ಶುಕ್ರವಾರ ವರದಿಯಾಗಿದೆ.
ಸುಮಾರು 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಂಟಿಕೊಪ್ಪ ಹೋಬಳಿಯ ಕೆದಕಲ್ ಗ್ರಾ.ಪಂ ವ್ಯಾಪ್ತಿಯ 7ನೇ ಮೈಲು ನಿವಾಸಿ ಪೌಲ್ ಡಿಸೋಝ ಅವರ ಮೃತ ದೇಹ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಮೃತದೇಹದಲ್ಲಿ ಭಾರವಾದ ಕಲ್ಲುಗಳನ್ನು ಕಟ್ಟಿಕೊಂಡಿರುವುದು ಗೋಚರಿಸಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪತ್ರಿಯರನ್ನು ಅಗಲಿದ್ದಾರೆ.
ಸಂಬಂಧಿ ಅಪಘಾತದಲ್ಲಿ ಮೃತ್ಯು
ಈ ನಡುವೆ ಪೌಲ್ ಡಿಸೋಝ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದ ಅಣ್ಣನ ಮಗ ಸಿಲ್ವಿನ್ ಡಿಸೋಝ ಅವರು ಅಪಘಾತದಲ್ಲಿ ಕೊನೆಯುಸಿಳೆದಿದ್ದಾರೆ.
ತಾವು ಪ್ರಯಾಣಿಸುತ್ತಿದ್ದ ಕಾರು ಬಿಡದಿ ಬಳಿ ರಸ್ತೆ ಬದಿಯ ವಿಭಜಕಕ್ಕೆ ಢಿಕ್ಕಿಯಾಗಿ ಮಗುಚಿಕೊಂಡಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿದ ಸಿಲ್ವಿನ್ ಡಿಸೋಝ ಅವರು ಮೃತಪಟ್ಟರು. ಕಾರಿನಲ್ಲಿದ್ದ ಉಳಿದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.