ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಯಾರೂ ಗತಿ ಇಲ್ಲದಕ್ಕೆ ಆರ್.ಅಶೋಕ್ ನೇಮಕ : ಶಾಸಕ ಪ್ರದೀಪ್ ಈಶ್ವರ್
ಬೆಂಗಳೂರು : ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಯಾರೂ ಗತಿ ಇಲ್ಲದ ಕಾರಣ ಆರ್.ಅಶೋಕ್ ಅವರನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕರಾಗಲು ಯಾರೂ ಗತಿ ಇರಲಿಲ್ಲ. ಹಾಗಾಗಿ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಇನ್ನೂ, ರಾಜ್ಯದಲ್ಲಿ ಅಸಮರ್ಥ ವಿರೋಧ ಪಕ್ಷದ ನಾಯಕ ಇದ್ದರೆ ಅದು ಅಶೋಕ್ ಮಾತ್ರ" ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕನ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಅಶೋಕ್, ಸಿದ್ದರಾಮಯ್ಯ ಅವರ ಬಳಿ ತರಬೇತಿ ಪಡೆದುಕೊಳ್ಳಲಿ. ಅಲ್ಲದೆ, ಹಲವು ಗಂಭೀರವಾದ ವಿಚಾರಗಳು ಇವೆ. ಅವುಗಳ ಬಗ್ಗೆ ಮಾತನಾಡಲಿ. ನಾವು ನಾಲ್ಕು ವರ್ಷ ಅವರನ್ನು ನೋಡಬೇಕು. ಗಂಭೀರ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ. ವೈಯಕ್ತಿಕವಾಗಿ ಮಾತನಾಡುವುದು ಬಿಡಲಿ" ಎಂದರು.
Next Story