ವಿಧಾನಸೌಧ ನವೀಕರಣ | ಸಿಎಂ, ಡಿಸಿಎಂ ಸೇರಿ ಸದನದ ಸದಸ್ಯರ ಮೆಚ್ಚುಗೆ
ಎಐ ಕ್ಯಾಮರಾ ಮೂಲಕ ನಿಗಾ, ವಿಧಾನಸಭಾ ಸಭಾಂಗಣ ಪ್ರವೇಶ ದ್ವಾರ ನವೀಕರಣ
ಬೆಂಗಳೂರು : ವಿಧಾನಸೌಧದ ಪಶ್ಚಿಮ ದ್ವಾರ ಹಾಗೂ ವಿಧಾನಸಭಾ ಸಭಾಂಗಣದ ಪ್ರವೇಶ ದ್ವಾರ ನವೀಕರಣ ಸೇರಿದಂತೆ ಸದನದೊಳಗಡೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನವೀಕರಣ ಮಾಡಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಸೌಧ ನವೀಕರಣಗೊಳಿಸಿ ಹೊಸರೂಪ ನೀಡಿರುವುದು, ಸಂವಿಧಾನ ಪ್ರಸ್ತಾವನೆಯನ್ನು ಅಳವಡಿಸಿರುವುದು ಖುಷಿ ತಂದಿದೆ. ತಮ್ಮ ಕಾಲದಲ್ಲಿ ಇದು ಆಗಿರುವುದು ಸಂತೋಷದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಎಐ ಕ್ಯಾಮರಾ ಮೂಲಕ ನಿಗಾ : ವಿಧಾಸಭೆಯಲ್ಲಿ ಎಐ ಕ್ಯಾಮರಾ ಅಳವಡಿಸಲಾಗಿದ್ದು, ಎಷ್ಟು ಗಂಟೆಗೆ ಒಳಬರುತ್ತೀರಿ, ಎಷ್ಟು ಗಂಟೆಗೆ ಹೊರಗಡೆ ಹೋಗುತ್ತೀರಿ, ಎಷ್ಟು ಹೊತ್ತು ಸದನದ ಒಳಗಡೆ ಕುಳಿತುಕೊಳ್ಳುತ್ತೀರಿ ಎಂಬುದರ ಸಂಪೂರ್ಣ ಮಾಹಿತಿ ಎಐ ಕ್ಯಾಮರಾಗಳಿಂದ ಸಿಗಲಿದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಹೇಳಿದರು.
Next Story