ಮುಡಾ ಪ್ರಕರಣ | ಸಿಎಂ ಪತ್ನಿ ಹಿಂದಿರುಗಿಸಿದ್ದ 14 ನಿವೇಶನಗಳ ಕ್ರಯಪತ್ರ ರದ್ದು
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿದ್ದ 14 ನಿವೇಶನಗಳ ಕ್ರಯಪತ್ರ ರದ್ದುಗೊಳಿಸಲಾಗಿದೆ.
ಈ ಸಂಬಂಧ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಡಾ ಆಯುಕ್ತ ರಘುನಂದನ್, ʼಯಾರೇ ನಿವೇಶನ ವಾಪಸ್ ನೀಡಿದರೂ ಹಿಂಪಡೆಯುತ್ತೇವೆ. ಪಾರ್ವತಿಯವರು 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಹಾಗಾಗಿ ವಿಜಯನಗರದಲ್ಲಿನ 14 ನಿವೇಶನಗಳ ಕ್ರಯ ಪತ್ರವನ್ನು ರದ್ದುಗೊಳಿಸಲಾಗಿದೆ. ಈ 14 ನಿವೇಶನಗಳ ಕ್ರಯ ಪತ್ರ ರದ್ದುಗೊಳಿಸಿರುವುದನ್ನು ಸರಕಾರದ ಗಮನಕ್ಕೂ ತರಲಾಗಿದೆʼ ಎಂದು ಮಾಹಿತಿ ನೀಡಿದರು.
ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ʼಮುಡಾದಿಂದ ನಿವೇಶನ ಪಡೆದ ಯಾರೇ ಬಂದು ನಿವೇಶನ ವಾಪಸ್ ನೀಡುತ್ತೇವೆ ಎಂದರೆ ಅವುಗಳನ್ನು ವಾಪಸ್ ಪಡೆಯುತ್ತೇವೆʼ ಎಂದು ಹೇಳಿದರು.
Next Story