ಬಿ.ಎಂ. ಮುಮ್ತಾಝ್ ಅಲಿ ಪ್ರಕರಣ: ಆರೋಪಿಗಳ ಮತ್ತೆ ಕಸ್ಟಡಿ ಕೋರಿ ತನಿಖಾಧಿಕಾರಿ ಸಲ್ಲಿಸಿದ್ದ ಅರ್ಜಿ ವಜಾ
ಮುಮ್ತಾಝ್ ಅಲಿ
ಬೆಂಗಳೂರು: ಮಂಗಳೂರಿನ ಬಿ.ಎಂ. ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು 40 ದಿನಗಳೊಳಗೆ ಮಾತ್ರ ಪೊಲೀಸ್ ಕಸ್ಟಡಿಗೆ ಪಡೆಯಲು ಅವಕಾಶವಿದೆ. ಅದನ್ನು ಮುಂದುವರಿಸಿ ಆರೋಪಿಗಳನ್ನು ಮತ್ತೆ ಪೊಲೀಸ್ ವಶಕ್ಕೆ ನೀಡಲು ಆಗದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾರ ಸಹೋದರ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸ್ ವಶಕ್ಕೆ ಕೋರಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಏಕ ಸದಸ್ಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
Next Story