ಎದುರಾಳಿಗಳ ಹಣಿಯಲು ಎಚ್ಐವಿ ಸೋಂಕಿತರ ಬಳಸಿ ಹನಿಟ್ರ್ಯಾಪ್ ತಂತ್ರ : ಮುನಿರತ್ನ ವಿರುದ್ಧ ಗಂಭೀರ ಆರೋಪ
ಮುನಿರತ್ನ/PC: x.com/RitamAppKannada
ಬೆಂಗಳೂರು : ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ಅವರ ಬಳಿ ಎಚ್ಐವಿ ಸೋಂಕಿತರನ್ನು ಕಳುಹಿಸಿ ಹನಿಟ್ರ್ಯಾಪ್ ಬಲೆಗೆ ಬೀಳಿಸುತ್ತಿದ್ದರು ಎಂಬುದಾಗಿ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.
ಇನ್ಸ್ಪೆಕ್ಟರ್ಗಳು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಪೊರೇಟರ್ ಸೇರಿ ರಾಜಕೀಯ ಎದುರಾಳಿಗಳ ಹಣಿಯಲು ಅವರ ಬಳಿಗೆ ಎಚ್ಐವಿ ಸೋಂಕಿತರನ್ನು ಕಳುಹಿಸುವ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದರು. ಮುನಿರತ್ನ ಅವರ ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ ಎಂದು ಸಂತ್ರಸ್ತ ಮಹಿಳೆಯು ಆರೋಪಿಸಿದ್ದಾರೆ.
ಸೆ.19ರಂದು ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ರಾಜಕೀಯ ಎದುರಾಳಿಗಳ ಹಣಿಯಲು ಶಾಸಕ ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು. ಅತ್ಯಾಚಾರ ಸಂತ್ರಸ್ತೆಯನ್ನು ಬಲವಂತವಾಗಿ ಬೆದರಿಸಿ ಬಳಸಿಕೊಂಡು ರಾಜಕೀಯ ವಿರೋಧಿಗಳ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಅತ್ಯಾಚಾರದ ವಿಡಿಯೋಗಳ ಮಾಡಿಟ್ಟುಕೊಂಡು ಹಲವರಿಗೆ ಬೆದರಿಕೆ ಹಾಕುತ್ತಿದ್ದರು. ಹನಿಟ್ರ್ಯಾಪ್ಗೆ ಅಮಾಯಕ ಎಚ್ಐವಿ ಸೋಂಕಿತರನ್ನೂ ಬಳಸಲಾಗುತ್ತಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.