ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ : ಮೂವರಿಗೆ ಜಾಮೀನು
ಮುನಿರತ್ನ
ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಪೊಲೀಸರ ವಶದಲ್ಲಿದ್ದ ಮೂವರಿಗೆ ಇಲ್ಲಿನ ಮೂರನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮುನಿರತ್ನ ನೀಡಿರುವ ದೂರಿನ ಮೇರೆಗೆ ಆರೋಪಿತರ ವಿರುದ್ಧ ಹತ್ಯೆ ಮಾಡುವ ಉದ್ದೇಶ ಹಾಗೂ ಒಳಸಂಚು ರೂಪಿಸಿ ಹಲ್ಲೆ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ 150 ಅನಾಮಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಿನ್ನೆ ಸ್ಥಳದಲ್ಲಿ ಮೂವರನ್ನು ಮೊಟ್ಟೆ ಎಸೆದ ಶಂಕೆ ಮೇರೆಗೆ ಪೊಲೀಸರು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ಗುರುವಾರ ಮೂರನೆ ಎಸಿಎಂಎಂ ನ್ಯಾಯಾಲಯ ಮೂವರಿಗೆ ಜಾಮೀನು ಮಂಜೂರು ಮಾಡಿದೆ.
ಇನ್ನೂ, ಮುನಿರತ್ನ ಅವರು, ತಮ್ಮನ್ನು ಹತ್ಯೆ ಮಾಡುವ ಸಂಚಿನ ಮುಂದುವರೆದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಪ್ರತಿಯಾಗಿ ಮೊಟ್ಟೆ ಎಸೆದವ ಎಂದು ಆರೋಪ ಎದುರಿಸುತ್ತಿರುವವರೂ ಸಹ ಪ್ರತಿದೂರು ನೀಡಿ ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
Next Story