ಮೈಸೂರು ಕಾಗದ ಕಾರ್ಖಾನೆ ಆರಂಭಕ್ಕೆ ಚಿಂತನೆ: ಸಚಿವ ಎಂ.ಬಿ.ಪಾಟೀಲ್
ಬೆಳಗಾವಿ: ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಸರಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಪರಿಷತ್ತಿನ ಪಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್.ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಕಾಗದ ಕಾರ್ಖಾನೆಯು ತೀವ್ರ ತರಹದ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಎಲ್ಲ ಉತ್ಪಾದನಾ ಘಟಕಗಳನ್ನು 2015 ರಿಂದ ಸ್ಥಗಿತಗೊಳಿಸಿದ್ದು, ಜೂನ್ 2023 ಅಂತ್ಯಕ್ಕೆ ಒಟ್ಟು 1482 ಕೋಟಿ ರೂ., ನಷ್ಟ ಆಗಿದೆ ಎಂದು ತಿಳಿಸಿದರು.
ಈ ಕಾರ್ಖಾನೆಯ ಭೂ ಪ್ರದೇಶವನ್ನು ಮೈಸೂರು ಕಾಗದ ಕಾರ್ಖಾನೆಯು ಸಂರಕ್ಷಿಸಿದ್ದು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಾರ್ಯಾಚರಣೆಗಳನ್ನು ಬಯಸುವುದರಿಂದ, ಕಂಪೆನಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದರು.
Next Story