ಮೈಸೂರು ದಸರಾ | 'ಗಜಪಯಣ'ದಲ್ಲಿ ಭಾಗವಹಿಸಲು ದುಬಾರೆ ಮತ್ತುಹಾರಂಗಿ ಶಿಬಿರದಿಂದ ಹೊರಟ ಸಾಕಾನೆಗಳು
ಮಡಿಕೇರಿ ಆ.31 : ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕುಶಾಲನಗರ ಸಮೀಪದ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದಿಂದ ಒಟ್ಟು ನಾಲ್ಕು ಆನೆಗಳನ್ನು ಗುರುವಾರ ಕಳುಹಿಸಿಕೊಡಲಾಯಿತು.
ದುಬಾರೆ ಶಿಬಿರದ ಧನಂಜಯ (45), ಗೋಪಿ (41) ಕಂಚನ್ (24) ಹಾಗೂ ಹಾರಂಗಿ ಶಿಬಿರದಲ್ಲಿದ್ದ ವಿಜಯ (63) ಆನೆಗಳನ್ನು ಲಾರಿಯಲ್ಲಿ ಕರೆದೊಯ್ಯಲಾಯಿತು.
ಆನೆಗಳ ಮಾವುತರಾದ ಭಾಸ್ಕರ, ನವೀನ್ ಕುಮಾರ್, ಬೋಜಪ್ಪ, ವಿಜಯ ಕಾವಾಡಿಗಳಾದ ಮಣಿ, ಶಿವು, ಭರತ್, ಮಣಿಕಂಠ ಹಾಗೂ ಸಿಬ್ಬಂದಿಗಳು ಜೊತೆಯಲ್ಲಿ ತೆರಳಿದರು.
ಕಂಚನ್ ಆನೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಆನೆಗಳು ಹಿಂದಿನ ವರ್ಷಗಳಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ದವು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ.ಶಿವರಾಂ ಮಾಹಿತಿ ನೀಡಿದ್ದಾರೆ.
Next Story