ಆನೇಕಲ್ | ಶಂಕಿತ ಉಗ್ರ ಗಿರೀಶ್ ಬೊರವ್ನನ್ನು ಬಂಧಿಸಿದ ಎನ್ಐಎ
ಸಾಂದರ್ಭಿಕ ಚಿತ್ರ
ಆನೇಕಲ್ : ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದವರು ಬಂಧಿಸಿರುವುದು ಗುರುವಾರ ವರದಿಯಾಗಿದೆ.
ಶಂಕಿತ ಉಗ್ರನನ್ನು ಅಸ್ಸಾಂನ ಲಕ್ಷ್ಮ್ಮೀಪುರ ಬೊಕಾಂಡಿಯ ಮೂಲದ ಗಿರೀಶ್ ಬೊರವ್(23) ಎಂದು ಗುರುತಿಸಲಾಗಿದೆ. ಈತ ಉಲ್ಫಾ ಸಂಘಟನೆಗೆ ಸೇರಿದವ ಎನ್ನಲಾಗಿದೆ.
ಉಗ್ರಗಾಮಿ ಚಟುವಟಿಕೆಗಳಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಈತ ಜಿಗಣಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪೆನಿಯಲ್ಲಿ ಆ.10ರಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
Next Story