ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ; ಇಂದು(ಮೇ.14) ಎಂಟು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ
ಕಲಬುರಗಿ : ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಜೂ.3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಮಂಗಳವಾರ ಎಂಟು ಅಭ್ಯರ್ಥಿಗಳಿಂದ ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ: ಕಾಂಗ್ರೆಸ್ ಪಕ್ಷದ ಚಂದ್ರಶೇಖರ ಬಸವರಾಜ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಮಲ್ಲಿಕಾರ್ಜುನ ವೀರಣ್ಣ ಧುತ್ತರಗಾಂವ, ಎನ್.ಪ್ರತಾಪ್ ರೆಡ್ಡಿ, ಎನ್.ಶೈಲಾಜಾ ರೆಡ್ಡಿ, ಮಹಬೂಬ್ ಮುಹಮ್ಮದ್ ಖ್ವಾಜಾ ಹುಸೇನ್ ವಂಟೇಲಿ, ಅನಿಮೇಶ ಮಹಾರುದ್ರಪ್ಪ, ಎಂ.ಡಿ.ಅಮನ್ ಹಾಗೂ ಶರಣಬಸಪ್ಪ ಪೀರಪ್ಪ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಮೇ 20ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾಗಿದೆ.
Next Story