ಕಮಿಷನ್ ಕೇಳಿದ್ದಾರೆಂದು ಗುತ್ತಿಗೆದಾರರ ಸಂಘದವರು ಎಲ್ಲಿಯೂ ಹೇಳಿಲ್ಲ: ಪ್ರಿಯಾಂಕ್ ಖರ್ಗೆ
ʼʼಕಮಿಷನ್ ಆರೋಪ ಬಿಜೆಪಿಯ ಹತಾಶೆ...ʼʼ
ಬೆಂಗಳೂರು, ಆ.10: ಬಿಬಿಎಂಪಿ ಗುತ್ತಿಗೆದಾರರಿಗೆ ಶೇ.15ರಷ್ಟು ಕಮಿಷನ್ ಬೇಡಿಕೆ ವಿಚಾರವಾಗಿ ಬಿಜೆಪಿ ಆರೋಪ ಹತಾಶೆಯಿಂದ ಕೂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದವರು ಕಮಿಷನ್ ಕೇಳಿದ್ದಾರೆಂದು ಎಲ್ಲಿಯೂ ಹೇಳಿಲ್ಲ. ಬಾಕಿ ಹಣ ಪಾವತಿ ವಿಳಂಬ ಎಂದಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ, ಸಚಿವರು ಉತ್ತರ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಬಿಜೆಪಿಗೆ ಯಾಕೆ ಇಷ್ಟು ಆಸಕ್ತಿ? ಬಿಜೆಪಿ ಅವರು ಈಗಾಗಲೇ ಏನಾದರೂ ಹಣ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿಯೂ ಸಹ ಕೆಲಸ ಪೂರ್ಣಗೊಂಡಿದ್ದರೆ, ಹಣ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ, ಸರಕಾರದ ವಿರುದ್ದ ಮಾತಾಡುವ ಬದಲು ವಿಪಕ್ಷ ಸ್ಥಾನ ಆಯ್ಕೆ ಮಾಡುವುದರ ಕುರಿತು ಚಿಂತನೆ ನಡೆಸಲಿ ಎಂದು ಅವರು ಹೇಳಿದರು.
Next Story