ಕರ್ನಾಟಕದಲ್ಲಿ ಆನೆಗಳ ಸಂಖ್ಯೆ 6,395ಕ್ಕೆ ಏರಿಕೆ; ಬಂಡೀಪುರದಲ್ಲೇ ಹೆಚ್ಚು: ಸಚಿವ ಈಶ್ವರ್ ಖಂಡ್ರೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ. 9: ಇತ್ತೀಚಿನ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಆನೆಗಳ ಸಂಖ್ಯೆ 6,049 ರಿಂದ 6,395ಕ್ಕೆ ಏರಿಕೆಯಾಗಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬುಧವಾರ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼರಾಜ್ಯದ 32 ವಿಭಾಗಗಳಲ್ಲಿ ನಡೆದ ಆನೆ ಗಣತಿ ನಡೆದಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚು ಆನೆಗಳು ಇರುವುದು ಪತ್ತೆಯಾಗಿವೆʼ ಎಂದು ತಿಳಿಸಿದರು.
'2017ರ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಅನೆಗಳಿದ್ದವು. ಈ ವರ್ಷ 6,395 ಆನೆಗಳಿರುವುದು ಗಣತಿಯಲ್ಲಿ ಪತ್ತೆಯಾಗಿದೆ. ಆನೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ' ಎಂದರು.
2023ರ ಮೇ 17ರಿಂದ ಮೇ 19ರವರೆಗೆ ಮೂರು ದಿನಗಳ ಕಾಲ ರಾಜ್ಯದ 32 ವಿಭಾಗಗಳಲ್ಲಿ ಆನೆ ಗಣತಿ ನಡೆಸಲಾಗಿದೆ. ಸುಮಾರು 3,400 ಅಧಿಕಾರಿಗಳು, ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.
Next Story