‘ಗ್ಯಾರಂಟಿ ಯೋಜನೆ’ ಶ್ಲಾಘಿಸಿದ ಆಕ್ಸ್‌ಫರ್ಡ್ ವಿವಿ: ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಆ. 19: ‘ಜಗತ್ತಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಮಾನವ ಹಕ್ಕುಗಳ ವೇದಿಕೆಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿ ತನ್ನ ವೆಬೆಸೈಟ್‍ನಲ್ಲಿ ಲೇಖನ ಪ್ರಕಟಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿವೆ’ ಎಂದು ಕಾಂಗ್ರೆಸ್ ತಿಳಿಸಿದೆ.
ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗೃಹಜ್ಯೋತಿ’ ಹಾಗೂ ‘ಶಕ್ತಿ’ ಯೋಜನೆಗಳು ಸಮಾಜ ಕಲ್ಯಾಣದ ಯೋಜನೆಗಳಾಗಿದ್ದರೂ ಪರಿಸರ ಹಾಗೂ ಹವಾಮಾನ ಸುಧಾರಣೆಯ ಅನುಕೂಲತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷತೆ ಹೊಂದಿದೆ ಈ ಲೇಖನ’ ಎಂದು ಹೇಳಿದೆ.
‘ಬಿಜೆಪಿಯ ಶೇ.40ರಷ್ಟು ಕಮಿಷನ್ ಲೂಟಿಯ ಆರೋಪವನ್ನು ಕೇವಲ ಆರೋಪ, ಸಾಕ್ಷಿ ಎಲ್ಲಿದೆ ಎನ್ನುತ್ತಿದ್ದರು ಬಿಜೆಪಿ ನಾಯಕರು. ಕಮಿಷನ್ ಹಗರಣವನ್ನು ನಿವೃತ್ತ ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ ನಮ್ಮ ಸರಕಾರ. ಸಾಕ್ಷಿ, ಪುರಾವೆ ಕೇಳುತ್ತಿದ್ದವರಿಗೆ ತನಿಖೆಯ ನಂತರ ಉತ್ತರ ಸಿಗಲಿದೆ, ಉತ್ತರವಷ್ಟೇ ಅಲ್ಲ ಶಿಕ್ಷೆಯೂ ಸಿಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.