ʼʼಜಿಲ್ಲೆಯ ಜನರು ವೋಟು ಹಾಕಲ್ಲʼʼ: ತುಮಕೂರಿನಿಂದ ದೇವೇಗೌಡ ಸ್ಪರ್ಧೆಗೆ ಬಿಜೆಪಿ ಸಂಸದ ಬಸವರಾಜು ವಿರೋಧ
ತುಮಕೂರು. ಸೆ.23: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಹೆಚ್.ಡಿ.ವೇಗೌಡರು ಸ್ಪರ್ಧಿಸಿದರೆ ತುಮಕೂರಿನ ಜನತೆ ಮತ್ತೊಂದು ಬಾರಿ ಸೋಲಿಸಲಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಭವಿಷ್ಯ ನುಡಿದಿದ್ದಾರೆ.
ನಗರದ ಸಾಯಿಬಾಬಾ ದೇವಾಲಯದ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼನಾನು ಸತ್ತರು ತುಮಕೂರು ಜಿಲ್ಲೆಗೆ ನೀರು ಬೀಡಲ್ಲ ಎಂದ ದೇವೇಗೌಡರಿಗೆ ಮತ ನೀಡಿದರೆ ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಕಲ್ಲು ಎಳೆದುಕೊಂಡಂತೆʼʼ ಎಂದಿದ್ದಾರೆ.
ʼʼಜೆಡಿಎಸ ಮತ್ತು ಬಿಜೆಪಿ ಮೈತ್ರಿಕೂಟದಲ್ಲಿ ಜೆಡಿಎಸ್ ತುಮಕೂರು ಸೇರಿದಂತೆ ಐದು ಸೀಟು ಕೇಳಿದ್ದಾರೆ ಎಂಬ ಮಾತಿದೆ. ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸಿದರೆ ಒಕ್ಕಲಿಗರೇ ಅವರಿಗೆ ಮತ ಹಾಕಲ್ಲ. ತುಮಕೂರಿಗೆ ಹೇಮಾವತಿ ನೀರು ಹರಿಯದಿರಲು ದೇವೇಗೌಡರೇ ಅಡ್ಡಿಯಾಗಿದ್ದಾರೆ. ಇದು ಗೊತ್ತಿರುವವರು ಯಾರು ದೇವೇಗೌಡರಿಗೆ ಓಟು ಹಾಕ್ತಾರೆ ಹೇಳಿʼʼ ಎಂದು ಪ್ರಶ್ನಿಸಿದರು
ʼʼಹಿಂದೇ ನಮ್ಮ ಜೊತೆ ಮೈತ್ರಿಯಾಗಿ 39 ಸೀಟ್ ಪಡೆದು ಕಾಂಗ್ರೆಸ್ ಜೊತೆ ಸೇರಿ ಸಿಎಂ ಆದ್ರು,ಇಂತಹವರನ್ನು ನಂಬಲು ಸಾಧ್ಯವೇ ಎಂದ ಸದ ಜಿ.ಎಸ್.ಬಸವರಾಜು,ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ತುಮಕೂರಿಗೆ ಎಂದೂ ಕಂಡಿರಿಯದ ಮೋಸ ಮಾಡಿದ್ದಾರೆ.ಯಾರಿಗಾದರೂ ವೋಟ್ ಹಾಕಲಿ.ದೇವೇಗೌಡರಿಗೆ ವೋಟ್ ಹಾಕಬಾರದು.ದೇವೇಗೌಡರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತೆʼʼ ಎಂದರು.
ʼʼಸೋಮಣ್ಣ ಅವರನ್ನು ನಾನು ಕರೆದಿಲ್ಲʼʼ
ʼʼತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವಿ.ಸೋಮಣ್ಣ ಅವರನ್ನು ನಾನು ಕರೆದಿಲ್ಲ. ಆದರೆ ಅವರ ಭವಿಷ್ಯಕ್ಕೆ ಅಡ್ಡಿಯಾಗುವುದಿಲ್ಲ. ಎಲ್ಲಿ ನಿಂತರೂ ಬೆಂಬಲಿಸುತ್ತೇನೆ ಎಂದು ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಲು ಸೋಮಣ್ಣ ಕಾರಣ. ಚುನಾವಣೆ ಖರ್ಚಿಗೆ ಅವರೇ ದುಡ್ಡು ಕೊಟ್ಟಿದ್ದುʼʼ ಎಂದು ಹೇಳಿದರು.