ಪ್ರಜ್ವಲ್ನನ್ನು ಪ್ರಧಾನಿ ಮೋದಿಯೇ ರಕ್ಷಿಸುತ್ತಿದ್ದಾರೆ : ಕಾಂಗ್ರೆಸ್ ಆರೋಪ
ಬೆಂಗಳೂರು : "ಪ್ರಜ್ವಲ್ ರೇವಣ್ಣನ ಪಾಸ್ ಪೋರ್ಟ್ ರದ್ದು ಮಾಡಿದರೆ ಆತ ಅನಿವಾರ್ಯವಾಗಿ ದೇಶಕ್ಕೆ ಮರಳಬೇಕಾಗುತ್ತದೆ, ಆದರೆ ಕೇಂದ್ರ ಸರ್ಕಾರ ಪಾಸ್ ಪೋರ್ಟ್ ರದ್ದು ಮಾಡಲು ಮುಂದಾಗುತ್ತಿಲ್ಲ. ಪ್ರಜ್ವಲ್ ರೇವಣ್ಣನನ್ನು ಪ್ರಧಾನಿ ಮೋದಿಯೇ ರಕ್ಷಿಸುತ್ತಿದ್ದಾರೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್ , "ರಾಜ್ಯ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ, ಇಂಟರ್ ಪೋಲ್ ಸಹಕಾರ ಕೋರಿತ್ತು. ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ" ಎಂದು ಹೇಳಿದೆ.
" ಮೋದಿಗೆ ಪ್ರಜ್ವಲ್ ರೇವಣ್ಣ "ಕೋಂಪ್ಲೇನ್ ಬಾಯ್" ಏಕೆಂದರೆ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿದರೆ ಮೋದಿ ಶಕ್ತಿ ಬರುತ್ತದೆಯಂತೆ. ಇಂತಹ ಕೋಂಪ್ಲೇನ್ ಬಾಯ್ಗೆ ಮೋದಿ ಕಷ್ಟ ಕೊಡಬಲ್ಲರೆ" ವ್ಯಂಗ್ಯವಾಡಿದೆ.
Next Story