ಮೌಢ್ಯತೆಯಿಂದ ದೇಶದ ಏಳಿಗೆ ಅಸಾಧ್ಯ: ಸಚಿವ ಎಚ್.ಸಿ ಮಹದೇವಪ್ಪ
ಬೆಂಗಳೂರು: ‘ದೀಪ ಹಚ್ಚುವ ಮೂಲಕ ಬಡತನ ನಿರ್ಮೂಲನೆ ಮಾಡುವ ಇಂತಹ ಮನಸ್ಥಿತಿಯ ಜನರು ಇರುವಾಗ, ಇವರಿಗೆ ಗರೀಬಿ ಹಟಾವೋದಂತಹ ಕಾರ್ಯಕ್ರಮಗಳಾಗಲೀ, ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮಹತ್ವವಾಗಲೀ, ಅನ್ನಭಾಗ್ಯದ ಪ್ರಾಮುಖ್ಯತೆಯಾಗಲೀ ತಿಳಿಯುವುದು ಅಸಾಧ್ಯವೇ ಸರಿ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ʼಎಕ್ಸ್ʼ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಮಹದೇವಪ್ಪ, ‘ಮೌಢ್ಯತೆಯಿಂದ ದೇಶದ ಏಳಿಗೆ ಎಂದಿಗೂ ಅಸಾಧ್ಯ ಎಂಬುದು ಸರ್ವಕಾಲಿಕ ಸತ್ಯ. ಪ್ರಜಾಪ್ರಭುತ್ವ ರಾಜ್ಯಾಂಗದ ಮಾರ್ಗದಲ್ಲಿ ಆಡಳಿತ ನಡೆಸಬೇಕಿದ್ದ ಪ್ರಧಾನಿಯವರೇ ಮೌಢ್ಯವನ್ನು ಬಿತ್ತರಿಸುತ್ತಾ, ಧಾರ್ಮಿಕ ಮಂಡಳಿಯ ನಡವಳಿಕೆಯನ್ನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಿತ್ತರಿಸುತ್ತಿರುವುದು ನಿಜವಾದ ದುರಂತಗಳಲ್ಲಿ ಒಂದು’ ಎಂದು ಟೀಕಿಸಿದ್ದಾರೆ.
Next Story