‘ಉಪಚುನಾವಣೆ’ ಟಿಕೆಟ್ ನೀಡುವುದು ನಮ್ಮ ಕೈಯಲ್ಲಿಲ್ಲ : ಆರ್.ಅಶೋಕ್
ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವ್ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಗ್ಗಟ್ಟಿನಿಂದ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಶ್ರಮಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗೆ ಟಿಕೆಟ್ ಕೊಡುವುದು ಮತ್ತು ತಪ್ಪಿಸುವುದು ನನ್ನ ಕೈಯಲ್ಲಿ ಇಲ್ಲ. ಟಿಕೆಟ್ ಕೊಡುವುದು ಎನ್ಡಿಎ. ಜೆ.ಪಿ.ನಡ್ಡಾ, ಅಮಿತ್ ಶಾ ಹಾಗೂ ಎನ್ಡಿಎ ಭಾಗಿದಾರ ಪಕ್ಷದ ಕುಮಾರಸ್ವಾಮಿ ಕೈಯಲ್ಲಿದೆ. ನಾವೇನಿದ್ದರೂ ಮನವಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಂಬಿಕೆ ಕಳೆದುಕೊಂಡ ಸಿಎಂ: ನಾವು ಯಾವುದೇ ಕಾರಣಕ್ಕೂ ಸರಕಾರ ಬೀಳಿಸುವುದಿಲ್ಲ. ಪದೇ ಪದೇ ಹೇಳಿಕೆ ಕೊಡುವ ಮೂಲಕ ಕಾಂಗ್ರೆಸ್ಸಿಗರು ತಮ್ಮ ಸರಕಾರವನ್ನೆ ದುರ್ಬಲಗೊಳಿಸುತ್ತಿದ್ದಾರೆ. ಅವರ ಪಕ್ಷದ 136 ಮಂದಿ ಶಾಸಕರ ಮೇಲೆ ಮುಖ್ಯಮಂತ್ರಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಅಶೋಕ್ ಟೀಕಿಸಿದರು.
Next Story