‘ಮುಡಾಗೆ ಹಿಂದಿರುಗಿಸಿರುವ ನಿವೇಶನ ಹಿಂಪಡೆಯಲಿ’ : ಸಿಎಂಗೆ ಆರ್.ಅಶೋಕ್ ಸವಾಲು

ಆರ್.ಅಶೋಕ್
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಸದೃಢ ಸಿಎಂ ಆಗಿದ್ದರೆ, ಮುಂದಿನ ಬಜೆಟ್ ಮಂಡಿಸುವ ಮುನ್ನ ‘ಮುಡಾ’ಗೆ ಹಿಂದಿರುಗಿಸಿರುವ ನಿವೇಶನಗಳನ್ನು ಹಿಂಪಡೆಯಲಿ. ಇದು ನನ್ನ ಸವಾಲು. ಇದಕ್ಕೆ ಸಿದ್ದರಾಮಯ್ಯನವರು ಒಪ್ಪುತ್ತರಾ?’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಜಾರಿ ನಿರ್ದೇಶನಾಲಯ (ಈಡಿ) ಬಂಧನದಿಂದ ತಪ್ಪಿಸಿಕೊಳ್ಳಲು ಮುಡಾದಿಂದ ಅಕ್ರಮವಾಗಿ ಪಡೆದ 14 ನಿವೇಶನಗಳನ್ನು ವಾಪಸ್ಸು ಕೊಟ್ಟಿದ್ದ ಅವರು ಕುಟುಂಬ, ಇದೀಗ ಸೈಟುಗಳನ್ನು ಹಿಂಪಡೆಯುವ ಮಾತಾಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿಗಳೇ, ನಿಮಗೆ ನನ್ನದೊಂದು ಸವಾಲು. ನಿಮ್ಮ ಪುತ್ರ, ಪರಿಷತ್ ಸದಸ್ಯ ಯತೀಂದ್ರ ಮುಡಾದಿಂದ 14 ಸೈಟುಗಳನ್ನು ವಾಪಸ್ಸು ಪಡೆಯುತ್ತೇವೆ, ಅದು ನಮಗೇ ಸೇರಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವು 16 ಬಜೆಟ್ ಅಲ್ಲ, 19 ಬಜೆಟ್ ಮಂಡಿಸುತ್ತೀರಿ ಎಂದೂ ಹೇಳಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
Next Story