ಸೈಟು ಲಪಟಾಯಿಸಿ ‘ಸ್ವಾಭಿಮಾನಿ ಸಮಾವೇಶ’ ಮಾಡಿದರೆ ಪಾಪ ಕಳೆಯುತ್ತದೆಯೇ? : ಆರ್.ಅಶೋಕ್
ಬೆಂಗಳೂರು: ಮುಡಾ ‘ಸೈಟು’ ಲಪಟಾಯಿಸಿ ಸ್ವಾಭಿಮಾನಿ ಸಮಾವೇಶ ಮಾಡಿದರೆ ಪಾಪ ಕಳೆದುಹೋಗುತ್ತದೆಯೇ?’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಸಿಎಂ ಸಿದ್ದರಾಮಯ್ಯನವರ ಪತ್ನಿಗೆ 14 ನಿವೇಶನ ಹಂಚಿಕೆ ಮಾಡುವಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಈಡಿ ವರದಿಯಲ್ಲಿ ಬಯಲಾಗಿದ್ದು, ಮುಡಾ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎನ್ನುತ್ತಿದ್ದ ಸಿಎಂ ಇದೀಗ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ’ ಎಂದು ಆಗ್ರಹಿಸಿದ್ದಾರೆ.
‘ಸಿಎಂ ಸಿದ್ದರಾಮಯ್ಯನವರೇ, ನಮ್ಮ ದೇಶದಲ್ಲಿ ಕಾನೂನು ಇನ್ನೂ ಗಟ್ಟಿಯಾಗಿದೆ. ತರಾತುರಿಯಲ್ಲಿ ಲೋಕಾಯುಕ್ತ ತನಿಖೆ ಮುಗಿಸಿ ಕ್ಲೀನ್‍ಚಿಟ್ ಪಡೆದುಕೊಂಡು ಜನರ ಕಣ್ಣಿಗೆ ಮಣ್ಣೆರೆಚುವ ನಿಮ್ಮ ತಂತ್ರ ಫಲಿಸುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸತ್ಯಮೇವ ಜಯತೇ’ ಎಂದು ಅಶೋಕ್ ತಿಳಿಸಿದ್ದಾರೆ.
ಸೈಟು ಲಪಟಾಯಿಸಿ ಸ್ವಾಭಿಮಾನಿ ಸಮಾವೇಶ ಮಾಡಿದರೆ ಪಾಪ ಕಳೆದುಹೋಗುತ್ತದೆಯೇ?
— R. Ashoka (@RAshokaBJP) December 4, 2024
ಸಿಎಂ @siddaramaiah ನವರ ಪತ್ನಿಯವರಿಗೆ 14 ನಿವೇಶನ ಹಂಚಿಕೆ ಮಾಡುವಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಇ.ಡಿ. ವರದಿಯಲ್ಲಿ ಬಯಲಾಗಿದ್ದು, ಮೂಡಾ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿಗಳು ಈಗ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.… pic.twitter.com/mlaWmQyOD2