ಮಣಿಪುರ ದಂಗೆಯ ಹಿಂದೆ RSS ಕೈವಾಡವಿದೆಯೇ?: ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು. 21: ‘ಕೇಂದ್ರ ಗೃಹ ಸಚಿವರಾಗಲಿ, ಪ್ರಧಾನಿಯಾಗಲಿ ಮಣಿಪುರದ ಬಗ್ಗೆ ನಿರ್ಲಕ್ಷ್ಯ ವಹಿಸಿ ಕುಳಿತಿರುವುದೇಕೆ? ಮಣಿಪುರದ ದಂಗೆಯ ಹಿಂದೆ ಆರೆಸೆಸ್ಸ್ ಕೈವಾಡವಿದೆಯೇ?’ ಎಂದು ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಣಿಪುರದಲ್ಲಿ ಜನಸಾಮಾನ್ಯರ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಗುತ್ತಿರುವುದು ಹೇಗೆ? ಪೆÇಲೀಸರೇ ಒಂದು ವರ್ಗದ ಜನರ ಪರವಾಗಿ ಕೆಲಸ ಮಾಡುತ್ತಿರುವುದೇಕೆ?, ಹಲವು ತಿಂಗಳುಗಳಿಂದ ಪ್ರಕ್ಷುಬ್ದ ಪರಿಸ್ಥಿತಿ ಇದ್ದರೂ ಅಲ್ಲಿನ ಬಿಜೆಪಿ ಸರಕಾರ ನಿಷ್ಕ್ರೀಯವಾಗಿರುವುದೇಕೆ?’ ಎಂದು ಪ್ರಶ್ನಿಸಿದೆ.
‘ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ಜರುಗುತ್ತಿದ್ದರೂ ಪ್ರಧಾನಿ ಮೋದಿ ಅವರಿಗೆ ಇದುವರೆಗೂ ಅಲ್ಲಿಗೆ ಭೇಟಿ ನೀಡಬೇಕೆಂದು ಮನಸಾಗಲಿಲ್ಲ. ಮಣಿಪುರದ ಬಗ್ಗೆ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯ ನಡೆಯಬೇಕಾಯ್ತು. ಗಲಭೆಗಳಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಮೋದಿಯವರಿಗೆ ಇದೆಲ್ಲಾ ಸಹಜ ಎನ್ನಿಸುತ್ತಿರಬಹುದೇ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.