ಕಂಬಳದಂತಹ ಸಾಂಪ್ರದಾಯಿಕ ಕ್ರೀಡೆಗಳು ಉಳಿದರೆ ಮಾತ್ರ ಸನಾತನ ಧರ್ಮ ಉಳಿಯಲು ಸಾಧ್ಯ: ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ (Photo: X/Tejasvi_Surya)
ಬೆಂಗಳೂರು: ‘ಜಲ್ಲಿಕಟ್ಟು’ ಮತ್ತು ‘ಕಂಬಳ’ದಂತಹ ಸಾಂಪ್ರದಾಯಿಕ ಆಟಗಳನ್ನು ನಿಲ್ಲಿಸಲು ʼಕೆಲವು ಅಜೆಂಡಾ ಹೊಂದಿರುವ ಕೆಲವು ಶಕ್ತಿಗಳುʼ ಪ್ರಯತ್ನಿಸುತ್ತಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ರವಿವಾರ ಹೇಳಿದ್ದಾರೆ ಎಂದು PTI ವರದಿ ಮಾಡಿದೆ.
ಬೆಂಗಳೂರು ಕಂಬಳದ ಎರಡನೇ ದಿನ ಮಾತನಾಡಿದ ಅವರು, ‘ಸನಾತನ ಧರ್ಮ’ ಉಳಿಸಲು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಒತ್ತಾಯಿಸಿದರು.
ಇಂದು ನಮ್ಮ ಸಾಂಪ್ರದಾಯಿಕ ಆಟಗಳಾದ ಜಲ್ಲಿಕಟ್ಟು ಮತ್ತು ಕಂಬಳವನ್ನು ತಡೆಯಲು ಕೆಲವು ಶಕ್ತಿಗಳು ವಿವಿಧ ಅಜೆಂಡಾಗಳೊಂದಿಗೆ ನ್ಯಾಯಾಲಯಗಳಿಗೆ ಹೋಗುತ್ತಿರುವುದನ್ನು ನಾವು ನೋಡಿದ್ದೇವೆ. ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಜಲ್ಲಿಕಟ್ಟು, ಕಂಬಳ ಮತ್ತು ಹಬ್ಬಗಳ ಆಚರಣೆಯನ್ನು ರಕ್ಷಿಸಲು ಒಂದಾಗಬೇಕು, ಏಕೆಂದರೆ ಈ ಆಟಗಳನ್ನು ಉಳಿಸಿದರೆ ಮಾತ್ರ ನಮ್ಮ ಸನಾತನ ಧರ್ಮವನ್ನು ಉಳಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
Next Story