3 ಅಲ್ಲ 6 ಮಂದಿ ಡಿಸಿಎಂ ಬೇಕು ಎಂದ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರಡ್ಡಿ
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತ್ತೆ ಮೂವರು ಡಿಸಿಎಂಗಳನ್ನು ನೇಮಿಸುವಂತೆ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ಕಾಂಗ್ರೆಸ್ ನ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಯಲ್ಲಿ ತಪೇನಿಲ್ಲ. ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ. ಹೀಗಾಗಿ ನನ್ನ ಪ್ರಕಾರ 6 ಮಂದಿ ಉಪ ಮುಖ್ಯಮಂತ್ರಿಗಳಾದರೆ ಒಳ್ಳೆಯದುʼʼ ಎಂದು ಹೇಳಿದರು.
ʼʼರಾಜ್ಯದ ಪ್ರತಿಯೊಂದು ವಲಯ ಸೇರಿದಂತೆ ಪ್ರಬಲ ಸಮುದಾಯಕ್ಕೆ ಹುದ್ದೆ ಕೊಟ್ಟಂತಾಗುತ್ತದೆ. ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿಸುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸಿಬಹುದು ಎಂದು ಹೇಳಲಾಗುತ್ತಿದೆ. ಆದ್ದರಿಂದ ಮೂರೇಕೆ ಆರು ಡಿಸಿಎಂಗಳನ್ನೇ ನೇಮಿಸಲಿʼʼ ಎಂದು ಅವರು ಆಗ್ರಹಿಸಿದರು.
Next Story