ಶಕ್ತಿ ಯೋಜನೆ: ಉಚಿತವಾಗಿ ಪ್ರಯಾಣಿಸಿದ 124 ಕೋಟಿ ಮಹಿಳೆಯರು
ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಶಕ್ತಿ ಯೋಜನೆ’ ಅನುಷ್ಟಾನವಾದ ದಿನದಿಂದ ಈವರೆಗೆ ಒಟ್ಟು 124 ಕೋಟಿಗೂ ಅಧಿಕ ಮಂದಿ ಮಹಿಳಾ ಪ್ರಯಾಣಿಕರು ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಿದ್ದು, ಅವರ ಟಿಕೆಟಿನ ಮೌಲ್ಯ 2,978 ಕೋಟಿ ರೂ.ಗಳಷ್ಟಾಗಿದೆ.
ರಾಜ್ಯಾದ್ಯಂತ ರವಿವಾರ ಒಂದೇ ದಿನದಲ್ಲಿ 63 ಲಕ್ಷಕ್ಕೂ ಅಧಿಕ ಮಂದಿ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಕೆಎಸ್ಸಾರ್ಟಿಸಿ-19,05,407, ಬಿಎಂಟಿಸಿ-19,48,721, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ 15,34,619, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ 9,74,573 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.
ಇನ್ನು ಜೂನ್ ತಿಂಗಳಿನಲ್ಲಿ 10ಕೋಟಿಗೂ ಅಧಿಕ, ಜುಲೈನಲ್ಲಿ 19ಕೋಟಿಗೂ ಅಧಿಕ, ಆಗಸ್ಟ್ ನಲ್ಲಿ 20ಕೋಟಿಗಳಷ್ಟು, ಸೆಪ್ಟೆಂಬರ್ ನಲ್ಲಿ 18ಕೋಟಿ, ಅಕ್ಟೋಬರ್ ನಲ್ಲಿ 18ಕೋಟಿಗೂ ಅಧಿಕ ಮತ್ತು ನವೆಂಬರ್ ನಲ್ಲಿ 18ಕೋಟಿಗೂ ಅಧಿಕ ಮಂದಿ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.