SSLC | ವಿಜ್ಞಾನ ಪರೀಕ್ಷೆಗೆ 15,311 ವಿದ್ಯಾರ್ಥಿಗಳು ಗೈರು: ಒಬ್ಬ ಡಿಬಾರ್
ಬೆಂಗಳೂರು: ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯು ನಡೆಯುತ್ತಿದ್ದು, ಶನಿವಾರ ನಡೆದ ವಿಜ್ಞಾನ ಪರೀಕ್ಷೆಗೆ 15,311 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಒಬ್ಬರು ಡಿಬಾರ್ ಆಗಿದ್ದಾರೆ.
ಪರೀಕ್ಷೆಗೆ 8,56,750 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 8,41,439 ವಿದ್ಯಾರ್ಥಿಗಳು ಹಾಜರಾಗಿದ್ದರು. ಬಾಗಲಾಕೋಟೆ ಜಿಲ್ಲೆಯ ಬಿಳಗಿಯಲ್ಲಿರುವ ಆದರ್ಶ ವಿದ್ಯಾಯಲದಲ್ಲಿ ಪರೀಕ್ಷೆ ಬರೆಯುವಾಗ ನಕಲು ಮಾಡಿ ಒಬ್ಬರು ಡಿಬಾರ್ ಆಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
Next Story