ಡ್ರಗ್ಸ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಡಾ.ಜಿ.ಪರಮೇಶ್ವರ್
ಆರು ತಿಂಗಳಲ್ಲಿ ಮಂಗಳೂರು ಡ್ರಗ್ಸ್ ಮುಕ್ತ
ಫೋಟೋ:Twitter
ಬೆಂಗಳೂರು: ಡ್ರಗ್ಸ್ ದಂಧೆ ಕೇವಲ ನಮ್ಮ ರಾಜ್ಯದಲ್ಲಷ್ಟೆ ಅಲ್ಲ, ಇಡೀ ದೇಶದಲ್ಲಿ ಆವರಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ವಿಧಾನ ಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಇದು ಬಹಳ ಗಂಭೀರವಾದ ವಿಚಾರ, 4-5 ವರ್ಷಗಳ ಹಿಂದೆ ಬೆಂಗ ಳೂರನ್ನು ಪಂಜಾಬ್ ರಾಜ್ಯಕ್ಕೆ ಹೋಲಿ ಸುತ್ತಿದ್ದರು. ಅಲ್ಲಿ ಹೊರ ದೇಶ, ಹೊರ ರಾಜ್ಯಗಳಿಂದ ಬರುತ್ತಿದ್ದ ಪ್ರಮಾಣ ಎಷ್ಟು ಇತ್ತೆಂದರೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಬಲಿ ಯಾಗುತ್ತಿದ್ದರು.ಆದುದರಿಂದ, ಪಂಜಾಬ್ ಅನ್ನು 'ಉಡ್ತಾ ಪಂಜಾಬ್' ಎನ್ನುತ್ತಿದ್ದರು ಎಂದು ತಿಳಿಸಿದರು.
ಯಾವ ಕಾರಣಕ್ಕೂ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಬೆಳೆ ಯುವುದಕ್ಕೆ ಬಿಡಬಾರದು ಎಂದು ನಿರ್ಧರಿಸಿದ್ದೇವೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆ ಬಗ್ಗೆ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದಿದ್ದೇನೆ. ತಿಂಗಳಲ್ಲಿ ಮಂಗಳೂರು 'ಡ್ರಗ್ಸ್ ಮುಕ್ತ ಆಗಬೇಕು ಎಂದು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅದೇ ರೀತಿ ಎಲ್ಲ ಜಿಲ್ಲೆಗಳ ಎಸ್ಪಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ 15-20 ದಿನಗಳಲ್ಲಿ 112 ಕೋಟಿ ರೂ.ಗಳ ಡ್ರಗ್ಸ್ ನಾಶ ಮಾಡಿದ್ದೇವೆ. ಇದು ನಿರಂತರವಾಗಿ ನಡೆಯಬೇಕು. ಮಾದಕ ವಸ್ತುಗಳಲ್ಲಿ ಗಾಂಜಾ ಅಷ್ಟೇ ಅಲ್ಲ, ಎಂಡಿಎಂಎ ಮಾತ್ರೆಗಳು, ಹೆರಾಯಿನ್ ಸೇರಿದಂತೆ ಅನೇಕ ಬಗೆಯ ವಸ್ತುಗಳು ಬಂದಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.