Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಶರಣಾದ ನಕ್ಸಲರಿಗೆ ಜಾಮೀನಿಗೆ ಕಾನೂನು...

ಶರಣಾದ ನಕ್ಸಲರಿಗೆ ಜಾಮೀನಿಗೆ ಕಾನೂನು ನೆರವು ಅಗತ್ಯ: ನಾಗರಿಕರ ವೇದಿಕೆ

ವಾರ್ತಾಭಾರತಿವಾರ್ತಾಭಾರತಿ11 Jan 2025 8:11 PM IST
share
ಶರಣಾದ ನಕ್ಸಲರಿಗೆ ಜಾಮೀನಿಗೆ ಕಾನೂನು ನೆರವು ಅಗತ್ಯ: ನಾಗರಿಕರ ವೇದಿಕೆ

ಬೆಂಗಳೂರು: ‘ಸಶಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಆರು ಮಂದಿ ನಕ್ಸಲೀಯರಿಗೆ ಕೋರ್ಟ್‍ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಲು ಮತ್ತು ವಿಚಾರಣೆಯನ್ನು ಸಮರ್ಥವಾಗಿ ಪೂರೈಸಿಕೊಳ್ಳಲು ಸರಕಾರ ಸೂಕ್ತ ಕಾನೂನು ನೆರವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ‘ಶಾಂತಿಗಾಗಿ ನಾಗರಿಕರ ವೇದಿಕೆ’ ಮನವಿ ಮಾಡಿದೆ.

ಶನಿವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ವೇದಿಕೆ ಸದಸ್ಯ ನೂರ್ ಶ್ರೀಧರ್, ‘ನಕ್ಸಲೀಯರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳುವ ಮೊದಲ ಹಂತ ಪೂರ್ಣಗೊಂಡಿದೆ. ಅವರನ್ನು ಕಾಡಿನಿಂದ ಕಾರಾಗೃಹಕ್ಕೆ ತರಲಾಗಿದೆ, ಇದೀಗ ಜೈಲಿನಿಂದ ನಾಡಿಗೆ ಕರೆತರುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ’ ಎಂದು ಹೇಳಿದರು.

‘ನಕ್ಸಲ್ ಸಮಸ್ಯೆ ಮುಕ್ತಾಯ’ ಎಂಬ ಮಾತುಗಳು ಕೇಳಿಸುತ್ತಿವೆ. ಈ ವಿದ್ಯಮಾನದಿಂದಾಗಿ ನಕ್ಸಲೀಯ ಮಾದರಿಯ ಹೋರಾಟ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದು ರೀತಿಯಲ್ಲಿ ಸಮಾರೋಪಗೊಂಡಿರುವುದು ವಾಸ್ತವ. ಆದರೆ, ನಕ್ಸಲೀಯರ ಕುರಿತು ಸಮಸ್ಯೆಗಳು ಮುಕ್ತಾಯಗೊಂಡಿಲ್ಲ. ಅವರು ಎತ್ತಿರುವ ಮಲೆನಾಡಿನ ಜನರ ಬದುಕಿನ ಸಮಸ್ಯೆಗಳು ಪರಿಹಾರದ ಧಿಕ್ಕಿನತ್ತ ಮುಖಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಕ್ಸಲೀಯ ಹೋರಾಟಗಾರರನ್ನು ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಂಡರೆ ಸಾಲದು, ಆ ಚಳವಳಿಗೆ ಕಾರಣವಾದ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಇಚ್ಛಾಶಕ್ತಿ ತೋರಬೇಕು. ಅವರ ಮೇಲಿರುವ ಎಲ್ಲ ಪ್ರಕರಣಗಳಲ್ಲೂ ಜಾಮೀನು ಸಿಗಬೇಕು. ನಂತರ ಇವೆಲ್ಲವುಗಳ ಕುರಿತು ವಿಚಾರಣೆ ನಡೆದು ಇತ್ಯರ್ಥಗೊಳ್ಳಬೇಕು. ಕಾಡಿನಿಂದ ಹೊರಕರೆದುಕೊಂಡು ಬರುವುದರಲ್ಲಿ ನಾಗರಿಕರ ವೇದಿಕೆ ಪ್ರಧಾನ ಪಾತ್ರ ವಹಿಸಿದೆ. ಈಗ ಅವರನ್ನು ಜೈಲಿನಿಂದ ನಾಡಿಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕು ಎಂದು ನೂರ್ ಶ್ರೀಧರ್ ಆಗ್ರಹಿಸಿದರು.

ದಸಂಸ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಏಳೆಂಟು ವರ್ಷಗಳಿಂದ ಜೈಲಿನಲ್ಲಿಯೇ ನರಳುತ್ತಿರುವ ಕನ್ಯಾಕುಮಾರಿ ಮತ್ತು ಇತರರ ಮೇಲಿರುವ ಮೊಕೆದ್ದೆಮಗಳು ಬಗೆಹರಿದು, ಹೊರಬರಲು ಸಹಕಾರ ನೀಡಬೇಕು. ರಾಜ್ಯ ಸರಕಾರ ಅಧಿಕೃತವಾಗಿ ಕೇರಳ ಮತ್ತು ತಮಿಳುನಾಡು ಸರಕಾರಗಳಿಗೆ ಪತ್ರ ಬರೆದು ಅವರ ಕಡೆಯಿಂದಲೂ ನಕ್ಸಲಿಯರನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಗೆ ಸಹಕಾರ ಸಿಗಬೇಕು ಎಂದು ಮನವಿ ಮಾಡಿದರು.

ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲೀಯರನ್ನು ಕರೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಂದಿರುವ ನಕ್ಸಲೀಯ ತಂಡ ಸರಕಾರದ ಗಮನಕ್ಕೆ ತಂದಿರುವ ದಮನಿತರು ಹಾಗೂ ಬಡಜನರ ಬದುಕಿಗೆ ಸಂಬಂಧಪಟ್ಟ 18 ಹಕ್ಕೊತ್ತಾಯಗಳನ್ನು ಚರ್ಚೆ ಮಾಡಿ ಅವುಗಳನ್ನು ಬಗೆಹರಿಸಬೇಕು. ಇದಕ್ಕಾಗಿ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿಶೇಷ ಸಭೆಗಳನ್ನು ಕರೆದು ಚರ್ಚಿಸಿ ಅಗತ್ಯ ಕ್ರಮಗಳ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ವೆಂಕಟೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರೊ.ನಗರಗೆರೆ ರಮೇಶ್, ತಾರಾರಾವ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಉಪಸ್ಥಿತರಿದ್ದರು.

‘ನಕ್ಸಲೀಯರು ‘ಶರಣಾಗಿರುವುದು’ ಅಲ್ಲ, ಹೋರಾಟದ ಮಾರ್ಗವನ್ನು ಬದಲಾಯಿಸಿಕೊಂಡಿದ್ದಾರಷ್ಟೇ. ಅವರು ಆ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳಲು ಸರಕಾರ ಅವಕಾಶ ಕೊಟ್ಟಿದೆ. ನಕ್ಸಲೀಯರು ಸಶಸ್ತ್ರ ಹೋರಾಟದ ಮಾರ್ಗದಿಂದ ಪ್ರಜಾತಾಂತ್ರಿಕ ಹೋರಾಟದ ಮಾರ್ಗಕ್ಕೆ ಮರಳಿದ್ದಾರೆ. ಹಾಗಾಗಿ ಇದು ‘ಶರಣಾಗತಿ ಅಲ್ಲ, ಹೊಸ ಮಾರ್ಗಕ್ಕೆ ಪರಿವರ್ತನೆ, ಪ್ರಜಾತಾಂತ್ರಿಕ ಹೋರಾಟದ ಮುಖ್ಯವಾಹಿನಿಗೆ ಮರಳಿರುವುದು’

-ಪ್ರೊ.ನಗರಗೆರೆ ರಮೇಶ್, ಶಾಂತಿಗಾಗಿ ನಾಗರಿಕರ ವೇದಿಕೆ

‘ನಕ್ಸಲೀಯರು ಜೈಲಿನಿಂದ ಹೊರಬರಲು ನ್ಯಾಯಾಂಗ, ಶಾಸಕಾಂಗ, ಸಾರ್ವಜನಿಕರು ಎಲ್ಲರೂ ಸಹಕರಿಸಬೇಕು. ಮುಖ್ಯವಾಹಿನಿಗೆ ಬಂದಿರುವ ನಕ್ಸಲೀಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿಎಂ ಅವರಿಗಿದೆ. ಆದರೆ ಇದೇ ಸರಕಾರ, ಇದೇ ಮುಖ್ಯಮಂತ್ರಿ ಕೊನೆ ತನಕವೂ ಇರಬೇಕಾಗುತ್ತದೆ. ಯಾಕೆಂದರೆ ಸಮಾಜವಾದಿ ಚಿಂತಕರು, ಮಾನವೀಯ ಚಿಂತನೆಯುಳ್ಳವರು ಮಾತ್ರ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಮಾವೋವಾದಿಗಳು ಜೀವನದಲ್ಲಿ ಶಿಸ್ತನ್ನು ಹೊಂದಿರುತ್ತಾರೆ. ಅವರು ಈಗಲೂ ಹೋರಾಟ ಮಾಡುತ್ತೇವೆಂದು ಹೇಳುತ್ತಿರುವುದು ಬಡಜನರಿಗೆ ನ್ಯಾಯ ಕೊಡಿಸುವುದಕ್ಕಾಗಿ, ಇದು ನಕ್ಸಲೀಯ ಚಳವಳಿಯ ಮಾನವೀಯತೆಯ ಮತ್ತೊಂದು ಮುಖ. ಮುಖ್ಯಮಂತ್ರಿಗಳೇ, ನಕ್ಸಲರನ್ನು ಕಾಡಿನಿಂದ ಜೈಲಿಗೆ ಹಾಕಿದ ಪಾಪಕ್ಕೆ ನಮ್ಮನ್ನು ಗುರಿಮಾಡಬೇಡಿ ಎಂದು ಮನವಿ ಮಾಡಿದರು.

-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

‘ಮುಖ್ಯವಾಹಿನಿಯ ಸದ್ದು-ಗದ್ದಲಗಳ ನಡುವೆ ಆದಿವಾಸಿ ವಿಕ್ರಂ ಗೌಡ್ಲು ಹತ್ಯೆ ವಿಚಾರ ಸಮಾಧಿಯಾಗಬಾರದು. ವಿಕ್ರಂಗೌಡ ಎನ್‍ಕೌಂಟರ್ ಅನ್ನು ನಾಗರಿಕರ ವೇದಿಕೆ ಪ್ರಶ್ನಿಸುತ್ತದೆ. ಎನ್‍ಕೌಂಟರ್ ಹೇಗೆ ಆಗಿದೆ ಎನ್ನುವ ಸತ್ಯ ಹೊರಬರಬೇಕೆಂದರೆ ತನಿಖೆ ಅಗತ್ಯವಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗದರ್ಶನದಂತೆ ಎನ್‍ಕೌಂಟರ್ ಕುರಿತು ತನಿಖೆ ನಡೆಸಿ, ಪ್ರಕರಣವನ್ನು ನ್ಯಾಯಾಲಯವೇ ರದ್ದುಗೊಳಿಸಬೇಕು. ಆದ್ದರಿಂದ ವಿಕ್ರಂಗೌಡ ಹತ್ಯೆ ಕುರಿತು ತನಿಖೆ ಆಗಬೇಕು’

-ನೂರು ಶ್ರೀಧರ್ ನಾಗರಿಕರ ವೇದಿಕೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X