ʼಹುಲಿ ಉಗುರುʼ ಕಾನೂನಿಗೆ ತಾತ್ಕಾಲಿಕ ತಡೆ ತನ್ನಿ: ಸಿಎಂ, ಅರಣ್ಯ ಸಚಿವರಿಗೆ ಕಿಮ್ಮನೆ ರತ್ನಾಕರ್ ಪತ್ರ
ʼಸಾರ್ವಜನಿಕರಿಗೆ ಸರಕಾರಕ್ಕೆ ಹಸ್ತಾಂತರ ಮಾಡುವ ಕಾಲಾವಕಾಶ ನೀಡಿʼ
ಶಿವಮೊಗ್ಗ, ಅ.28: ಈ ದೇಶದಲ್ಲಿ ಮತ್ತು ನಮ್ಮ ನಾಡಿನಲ್ಲಿ ಅನೇಕ ಅನುಪಯುಕ್ತ ಕಾಯ್ದೆಗಳು ಜನಮಾನಸಕ್ಕೆ ಬಾರದೇ ಜೀವಂತವಿದೆ, ಅವುಗಳನ್ನು ಪುನರ್ ಪರಿಶೀಲಿಸಿ ವರ್ತಮಾನಕ್ಕೆ ಅಗತ್ಯತೆಗೆ ಪೂರಕ ತಿದ್ದುಪಡಿ ಅಥವಾ ರದ್ದು ಪಡಿಸುವ ಪ್ರಯತ್ನ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರ ಬರೆದಿದ್ದಾರೆ.
“ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ" ಆದರೆ ಅದಕ್ಕೆ ಪೂರಕ ತಿದ್ದುಪಡಿ ಅಗತ್ಯ ’ಹುಲಿ ಉಗುರು ಮತ್ತು ಇತರ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಕಾನೂನು ಬಾಹಿರವಾಗಿ (ಕಾಯ್ದೆಗೆ ವಿರುದ್ಧವಾಗಿ) ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅವುಗಳಿಗೆ ಸಂಬಂಧಪಟ್ಟಂತೆ ತಾತ್ಕಾಲಿಕವಾಗಿ ಸಾಗ್ರೀವಾಜ್ಞೆ ಮಾಡಿ, ಸಾರ್ವಜನಿಕರಿಗೆ ಕಾಲಾವಕಾಶ ನೀಡಿ ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಅವಕಾಶ ಮಾಡಿದರೆ, ಸರ್ಕಾರಕ್ಕೂ ಒಳ್ಳೆಯದು ಸಾರ್ವಜನಿಕರಿಗೂ ಒಳ್ಳೆಯದೆ, ಇಲ್ಲದೆ ಇದ್ದರೆ ಆಕ್ರಮವಾಗಿ ಸಂಗ್ರಹಿಸಿದ ವಸ್ತುಗಳು, ಕಾನೂನು ಕಾಯ್ದೆಗೆ ಹೆದರಿ ಕಸದ ಪಾಲಾಗುತ್ತದೆ. ಹಾಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.