ಮಡಿಕೇರಿ: 10ಕ್ಕೂ ಹೆಚ್ಚು ವಾಹನಗಳಿಗೆ ಢಿಕ್ಕಿ ಹೊಡೆದ ಟ್ರ್ಯಾಕ್ಟರ್
ಮಡಿಕೇರಿ: ಚಾಲಕನ ನಿಯಂತ್ರಣ ಕಳೆದುಕೊಂಡು ರಭಸವಾಗಿ ಚಲಿಸಿದ ಟ್ರ್ಯಾಕ್ಟರ್ 10 ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯಾದ ಘಟನೆ ಮಡಿಕೇರಿ ನಗರದ ಮಹದೇವಪೇಟೆ ರಸ್ತೆಯಲ್ಲಿ ನಡೆದಿದೆ.
ಅಪಘಾತಕ್ಕೆ ಕಾರಣಕರ್ತನಾದ ಟ್ರ್ಯಾಕ್ಟರ್ ಚಾಲಕ ಎಂ.ಹರ್ಷವರ್ಧನ್ (23) ಎಂಬಾತನನ್ನು ನಗರ ಸಂಚಾರಿ ಪೊಲೀಸರು ಟ್ರ್ಯಾಕ್ಟರ್ ಸಹಿತ ವಶಕ್ಕೆ ಪಡೆದಿದ್ದಾರೆ.
ಅತಿವೇಗದಲ್ಲಿ ಬಂದ ಟ್ರ್ಯಾಕ್ಟರ್ ನಿಲ್ಲಿಸಿದ್ದ ಮತ್ತು ಚಲಿಸುತ್ತಿದ್ದ ವಾಹನಗಳಿಗೆ ಢಿಕ್ಕಿ ಹೊಡೆಯಿತು. ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು ಹಾಗೂ ಇತರ ವಾಹನ ಚಾಲಕರು ಅಪಾಯದಿಂದ ತಪ್ಪಿಸಿಕೊಂಡು ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದರು. ಭಾರೀ ಅನಾಹುತವೊಂದು ತಪ್ಪಿದೆಯಾದರೂ ಹಲವು ವಾಹನಗಳಿಗೆ ಹಾನಿಯಾಗಿದೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story