ಜಾತ್ಯತೀತತೆಯ ಸಿದ್ಧಾಂತದಲ್ಲಿ ರಾಜಿಯಾಗುವ ಮಾತೇ ಇಲ್ಲ: JDS ಶಾಸಕ ಜಿ.ಟಿ. ದೇವೇಗೌಡ
ʼʼದೇಶದ ಘನತೆಯನ್ನು ಎತ್ತಿಹಿಡಿಯಲು NDA ಒಕ್ಕೂಟ ಸೇರಿದ್ದೇವೆʼʼ
ಬೆಂಗಳೂರು: ʼʼಜೆಡಿಎಸ್ ಎಂದಿಗೂ ತನ್ನ ಪ್ರಾದೇಶಿಕತೆ ಮತ್ತು ಜಾತ್ಯತೀತತೆಯ ಸಿದ್ಧಾಂತದಲ್ಲಿ ರಾಜಿಯಾಗುವ ಮಾತೇ ಇಲ್ಲʼʼ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಕಸ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ʼʼಮಿತಿಮೀರಿದ ಭ್ರಷ್ಟಾಚಾರವನ್ನು ತಡೆಯಲು ರಾಜ್ಯವನ್ನು ಲೂಟಿ ಒಡೆಯುವುದನ್ನು ನಿಲ್ಲಿಸಲು ಮೈತ್ರಿಯ ಅವಶ್ಯಕತೆ ಇದ್ದು, ದೇಶದ ಉಳಿವಿಗಾಗಿ ಮತ್ತು ಜಾಗತಿಕ ರಂಗದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿಯಲು NDA ಒಕ್ಕೂಟ ಸೇರಿದ್ದುದ್ದೇವೆʼʼ ಎಂದು ತಿಳಿಸಿರು.
ʼʼಕರ್ನಾಟಕದ ಹಿತಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿರುವುದು ರಾಜ್ಯರಾಜಕರಣದಲ್ಲಿ ಉತ್ತಮ ಸಂದೇಶವನ್ನು ಸಾರುತ್ತದೆ. ಈ ಎರಡೂ ಪಕ್ಷಗಳ ಮೈತ್ರಿಯಿಂದ ಮುಂದಿನ ದಿನಗಳಲ್ಲಿ ಎರಡು ಪಕ್ಷಗಳಿಗೆ ದೊಡ್ಡ ಶಕ್ತಿ ಬರಲಿದೆʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Next Story