ಯುಪಿಎಸ್ಸಿ ಪರೀಕ್ಷೆ ಫಲಿತಾಂಶ : ರಾಜ್ಯದಿಂದ ಒಟ್ಟು 26 ಮಂದಿ ತೇರ್ಗಡೆ
Photo credit: ThePrint
ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗವು 2023ನೆ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರದಂದು ಪ್ರಕಟಿಸಿದ್ದು, ಪರೀಕ್ಷೆಯಲ್ಲಿ ರಾಜ್ಯದಿಂದ ಒಟ್ಟು 26 ಮಂದಿ ತೇರ್ಗಡೆಯಾಗಿದ್ದಾರೆ.
ಪರೀಕ್ಷೆಯನ್ನು ಬರೆದ ಸೌಭಾಗ್ಯ ಎಸ್.ಬೀಳಗಿಮಠ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ಪರೀಕ್ಷೆಯಲ್ಲಿ 101ನೆ ರ್ಯಾಂಕ್ ಪಡೆದಿದ್ದಾರೆ. ನಾಗೇಂದ್ರ ಬಾಬು ಕುಮಾರ್, ಯಶಸ್ವಿನಿ ಆರ್. ಶಶಾಂತ್ ಎನ್.ಎಂ., ಮುಹಮ್ಮದ್ ಅಸೀಮ್ ಮುಜ್ತಬಾ, ಸೋಮ್ಜಲ್, ಮೇಘನಾ ಐ.ಎನ್., ಡಾ. ಭಾನುಪ್ರಕಾಶ್, ಸುಮಾ ಎಚ್.ಕೆ. ರಾಜ್ಯದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಶಾಂತಪ್ಪ ಕುರುಬರ, ಭಾರತ್ ಸಿ. ಯಾರಮ್, ತೇಜಸ್ ಎನ್., ಪ್ರಮೋದ್ ಆರಾಧ್ಯ, ನವ್ಯ ಕೆ., ಮೇಘನಾ ಕೆ.ಟಿ., ಚಂದನ್ ಬಿ.ಎಸ್., ವಿವೇಕ್ ರೆಡ್ಡಿ ಎನ್., ಸೃಷ್ಟಿ ದೀಪ್, ತೇಜಸ್ವಿನಿ, ರಕ್ಷಿತ್ ಕೆ.ಗೌಡ, ಹಂಸ ಶ್ರೀ ಎನ್.ಎ., ಅಭಿಶೇಕ್ ಕೆ.ಎಚ್., ವಸಂತ್ ಕುಮಾರ್ ಜಿ., ವಿಜಯಕುಮಾರ್ ಟಿ., ತನುಜ್ ಕುಮಾರ್ ಕೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೀದರ್ ನ ಮುಹಮ್ಮದ್ ಅಸೀಮ್ ಮುಜ್ತಬಾಗೆ 481ನೆ ರ್ಯಾಂಕ್: 2023ನೆ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೀದರ್ ನ ಮುಹಮ್ಮದ್ ಅಸೀಮ್ ಮುಜ್ತಬಾ 481ನೆ ರ್ಯಾಂಕ್ ಪಡೆದುಕೊಂಡಿದ್ದಾರೆ. ಐದನೆ ಬಾರಿಯ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಹಿಂದೆ 2022ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ರೈಲ್ವೆ ಸರ್ವಿಸ್ಗೆ ಆಯ್ಮೆಯಾಗಿದ್ದರು. ಈಗ ಮತ್ತೊಂದು ಪ್ರಯತ್ನದಲ್ಲಿ 481 ರ್ಯಾಂಕ್ ಬಂದಿದೆ. ಅಸೀಮ್ ಅವರ ತಂದೆ ಬ್ರೀಮ್ಸ್ ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದರೆ ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ.
ಕನ್ನಡದಲ್ಲೇ ಪರೀಕ್ಷೆ ಬರೆದ ಶಾಂತಪ್ಪ ಕುರುಬರ : ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಪರೀಕ್ಷೆಯಲ್ಲಿ ದೇಶಕ್ಕೆ 644ನೆ ರ್ಯಾಂಕ್ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶಾಂತಪ್ಪ ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದರು. ಅವರು 2016ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. ಸದ್ಯ ಇವರು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಚಿಂಗ್ ಕ್ಲಾಸ್ಗೆ ಹೋಗದೆ ಪರೀಕ್ಷೆ ಬರೆದಿದ್ದ ಸೌಭಾಗ್ಯ: ಮೂಲತಃ ದಾವಣಗೆರೆಯವರಾದ ಸೌಭಾಗ್ಯ ಎಸ್. ಬೀಳಗಿಮಠ ಯಾವುದೇ ಕೋಚಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತಮಗೆ ಶಿಕ್ಷಣ ನೀಡುವ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಂ. ಅವರ ನಿವಾಸದಲ್ಲೇ ಉಳಿದು ವಿದ್ಯಾಭ್ಯಾಸ ಮಾಡಿದ ಸೌಭಾಗ್ಯ, ಅಶ್ವಿನಿ ಅವರ ಕೊಟ್ಟ ತರಬೇತಿಯನ್ನು ಪಡೆದು ಇದೀಗ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.