ನಾವು ಲಿಂಗಾಯತರು 74 ಮಂದಿ ಶಾಸಕರಿದ್ದೇವೆ; ಹೊಸ ಸರಕಾರನೇ ಮಾಡಬಹುದು: ಶಾಮನೂರು ಶಿವಶಂಕರಪ್ಪ ಹೇಳಿಕೆಯ ವೀಡಿಯೊ ವೈರಲ್
ದಾವಣಗೆರೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತ ಅವರ ಹೇಳಿಕೆ ವೈರಲ್ ಆಗಿದೆ.
ʼʼ9 ಮಂದಿಯನ್ನು ಸಚಿವರನ್ನಾಗಿ ಮಾಡುತ್ತೇವೆ ಅಂತ ಹೇಳಿದ್ದರು, ಈಗ 7 ಮಂದಿಯನ್ನು ಮಾತ್ರ ಮಾಡಿದ್ದಾರೆ. ನಾವು (ಲಿಂಗಾಯತರು) ಎಲ್ಲಾ ಪಕ್ಷದವರು ಸೇರಿದರೆ 74 ಮಂದಿ ಶಾಸಕರಿದ್ದೇವೆ. ಪರ್ಸಂಟೇಜ್ ಲೆಕ್ಕ ಹಾಕಿದರೆ ಅದು ಜಾಸ್ತಿ ಬರುತ್ತೆ. ಬೇರೆ ಶಾಸಕರನ್ನು ಸೇರಿಸಿ ಹೊಸ ಸರಕಾರನೇ ಮಾಡಬಹುದುʼʼ ಎಂದು ಹೇಳಿರುವುದು ವೀಡಿಯೊದಲ್ಲಿದೆ.
ʼʼಮುಖ್ಯಮಂತ್ರಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿಯ ಅಂಕಿ ಸಂಖ್ಯೆಯನ್ನು ಸಮಯ ಬಂದಾಗ ಪ್ರೂವ್ ಮಾಡ್ತೀವಿʼʼ ಎಂದು ಅವರು ಎಚ್ಚರಿಕೆಯ ಮಾತುಗಳನ್ನಾಡಿರುವುದು ವೈರಲ್ ವೀಡಿಯೊದಲ್ಲಿದೆ.
74 ಮಂದಿ ಶಾಸಕರಿಲ್ಲ !
ಶಾಮನೂರು ಅವರು ಹೇಳಿದಂತೆ ಲಿಂಗಾಯತ ವೀರಶೈವ ಸಮುದಾಯದ 74 ಮಂದಿ ಶಾಸಕರಿಲ್ಲ. ಬದಲಿಗೆ ಈ ಬಾರಿ ಕಾಂಗ್ರೆಸ್ ನ 34 ಮಂದಿ ಶಾಸಕರು ಸೇರಿ ಎಲ್ಲ ಪಕ್ಷಗಳಿಂದ ಒಟ್ಟು 54 ಮಂದಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೇಳಿಕೆಯ ವೀಡಿಯೊ ಇಲ್ಲಿದೆ...