ಕರ್ನಾಟಕ್ಕೆ ಅಕ್ಕಿ ಕೊಟ್ಟಿದ್ದರೆ ಏನಾಗುತ್ತಿತ್ತು: ಶಿವಲಿಂಗೇ ಗೌಡ
ಬೆಂಗಳೂರು: ಎಫ್ ಸಿ ಐ ಯಲ್ಲಿ ಅಕ್ಕಿ ದಾಸ್ತಾನಿರುವುದು ಸಾಬೀತಾಗಿದೆ. ಈ ಟೆಂಡರ್ ಕರೆದರೂ ಯಾರೂ ಅಕ್ಕಿ ಖರೀದಿಸಲು ಬರುತ್ತಿಲ್ಲ. ಉಳಿದಿರುವ ಅಕ್ಕಿಯನ್ನು ಇಲಿಗೆ ಹಾಕ್ತೀರಾ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾಕಾಗಿ ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿದ್ದೇವೆ. ನಮ್ಮ ತೆರಿಗೆ ಹಣ ನಿಮಗೆ ಬರುತ್ತಿಲ್ಲವಾ? ಒಕ್ಕೂಟ ವ್ಯವಸ್ಥೆ ಎಂದರೆ ಕೊಟ್ಟು-ಪಡೆದು ಬಾಳುವ ರೀತಿ. ನಾವು ಒಕ್ಕೂಟವಾಗಿ ಗಣರಾಜ್ಯ ಪರಿಷತ್ತನ್ನು ನಿರ್ಮಾಣ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥಯಲ್ಲಿದ್ದುಕೊಂಡು ನೀವು ಅಕ್ಕಿ ಕೊಡುವುದಿಲ್ಲ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಚುನಾವಣೆಗೂ ಮುನ್ನ ಎಲ್ಲರೂ ಆಶ್ವಾಸನೆ ನೀಡುತ್ತಾರೆ. ಆದರೆ ಅವುಗಳನ್ನು ಜಾರಿ ಮಾಡಲು ಒಂದೆರಡು ತಿಂಗಳು ಅವಕಾಶ ಕೊಡಬೇಕು. ಕರ್ನಾಟಕ್ಕೆ ಅಕ್ಕಿ ಕೊಟ್ಟಿದ್ದರೆ ಏನಾಗ್ತಿತ್ತು. ನಿಮ್ಮ ಈ ನಡೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಅಸ್ತ್ರವಾಗಲಿದೆ ಎಂದು ಹೇಳಿದರು.
Next Story