ಸಾಹಿತಿ ನಾ. ಡಿಸೋಜ ಅವರಿಗೆ ಪಂಪ ಪ್ರಶಸ್ತಿ
ಬಾನು ಮುಷ್ತಾಕ್ ಗೆ ಅತ್ತಿಮಬ್ಬೆ, ಸದಾನಂದ ಸುವರ್ಣ ಅವರಿಗೆ ಬಿ ವಿ ಕಾರಂತ್ ಪ್ರಶಸ್ತಿ
ಸಾಹಿತಿ ನಾ. ಡಿಸೋಜ
ಬೆಂಗಳೂರು: ಹಿರಿಯ ಸಾಹಿತಿ ನಾ. ಡಿಸೋಜ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಐದು ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡ ಈ ಪ್ರಶಸ್ತಿ ಪ್ರದಾನ ಸಮಾರಂಭವು ಜ.31 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಇನ್ನಿಬ್ಬರು ಸಾಹಿತಿಗಳಾದ ಹಾಸನದ ಬಾನು ಮುಷ್ತಾಕ್ ಅವರು ಅತ್ತಿಮಬ್ಬೆ ಪ್ರಶಸ್ತಿ ಹಾಗೂ, ಮಂಗಳೂರಿನ ಸದಾನಂದ ಸುವರ್ಣ ಅವರು ಬಿ ವಿ ಕಾರಂತ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Next Story