ಬೌಲರ್-ಕ್ಯಾಪ್ಟನ್‌ಗಳು
ಜಸ್‌ಪ್ರಿತ್ ಬುಮ್ರಾ ಅವರು ಪರ್ತ್ ಟೆಸ್ಟ್‌ನಲ್ಲಿ ಭಾರತವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ ನಂತರ, ಬೌಲರ್ ಮತ್ತು ನಾಯಕನಾಗಿ ಅವರು ಅಸಾಧಾರಣ ಪ್ರದರ್ಶನ ನೀಡಿದ ನಂತರ, ಹಲವು ವರ್ಷಗಳ ಹಿಂದೆ ನಾನು ಬರೆದಿದ್ದ ಅಂಕಣ ಬರಹವನ್ನು ನೆನಪಿಸಿಕೊಂಡೆ. ಅದು ಅನಿಲ್ ಕುಂಬ್ಳೆ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದಾಗ ಬರೆದದ್ದಾಗಿತ್ತು. ‘ಬೌಲರ್‌ಗಳು ಉತ್ತಮ ನಾಯಕರಾಗಬಲ್ಲರೆ?’ ಎಂಬ ಶೀರ್ಷಿಕೆಯ ಆ ಅಂಕಣ ಬರಹ 1998ರ ಜುಲೈ 26ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಬ್ಯಾಟರ್‌ಗಳೇ ಅತ್ಯುತ್ತಮ ನಾಯಕರಾಗುತ್ತಾರೆ ಎಂಬ ವ್ಯಾಪಕ ನಂಬಿಕೆಯ ವಿರುದ್ಧವಾಗಿ, ಕಡೇಪಕ್ಷ ಸೂಕ್ಷ್ಮ ವ್ಯತ್ಯಾಸವನ್ನು ಎದುರಿಸಲು ನಾನು ಪ್ರಯತ್ನಿಸುತ್ತಿದ್ದೆ. ಒಂದು ತಂಡ ಮೈದಾನದಲ್ಲಿದ್ದಾಗ ನಾಯಕತ್ವ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದರಿಂದ, ಬ್ಯಾಟರ್‌ಗಳು ಬೌಲಿಂಗ್ ಬದಲಾವಣೆಗಳನ್ನು ಮಾಡುವಲ್ಲಿ ಮತ್ತು ಫೀಲ್ಡ್‌ಗಳನ್ನು ಹೊಂದಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಬೌಲರ್‌ಗಳು ತಮ್ಮ ತಂಡಗಳನ್ನು ಮುನ್ನಡೆಸಿದಾಗ, ಅವರು ಅಂಡರ್ ಬೌಲ್ ಅಥವಾ ಓವರ್ ಬೌಲ್‌ಗೆ, ಸಾಮಾನ್ಯವಾಗಿ ಎರಡನೆಯದರ ಕಡೆ ಒಲವು ತೋರುತ್ತಾರೆ ಎಂದು ಹೇಳಲಾಗುತ್ತದೆ.
ಬ್ಯಾಟರ್-ಕ್ಯಾಪ್ಟನ್‌ಗಳ ಪರವಾದ ವಾದ ಕೆಲವು ಐತಿಹಾಸಿಕ ಪುರಾವೆಗಳಿಂದ ಕೂಡ ಸಾಬೀತಾಯಿತು. 1998ರಲ್ಲಿ ಬರೆಯುತ್ತಾ, ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರು ಬ್ಯಾಟರ್‌ಗಳಾಗಿದ್ದಾರೆ ಎಂದು ನಾನು ಒಪ್ಪಿಕೊಂಡಿದ್ದೇನೆ. ಡೊನಾಲ್ಡ್ ಬ್ರಾಡ್‌ಮನ್, ಕ್ಲೈವ್ ಲಾಯ್ಡ್, ಲೆನ್ ಹಟ್ಟನ್, ಫ್ರಾಂಕ್ ವೊರೆಲ್ ಮತ್ತು ಅಲನ್ ಬಾರ್ಡರ್. ಅದೇನೇ ಇದ್ದರೂ, ಇದಕ್ಕೆ ಪ್ರತಿಯಾಗಿ ಕೆಲವು ಪ್ರಭಾವಶಾಲಿ ಉದಾಹರಣೆಗಳೂ ಇವೆ ಎಂದು ನಾನು ವಾದಿಸಿದೆ: ಗಮನಾರ್ಹವಾಗಿ ಆಸ್ಟ್ರೇಲಿಯದ ರಿಚಿ ಬೆನಾಡ್ ಮತ್ತು ಇಂಗ್ಲೆಂಡ್‌ನ ರೇ ಇಲ್ಲಿಂಗ್‌ವರ್ತ್, ಇಬ್ಬರೂ ಸ್ಪಿನ್ ಬೌಲರ್‌ಗಳು ತಮ್ಮ ತಂಡಗಳನ್ನು ವಿಭಿನ್ನವಾಗಿ ಮುನ್ನಡೆಸಿದರು.
ಆ ಸಮಯದಲ್ಲಿ, ಭಾರತದ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ತಮ್ಮ ವೃತ್ತಿಜೀವನದ ಅಂತ್ಯವನ್ನು ತಲುಪುತ್ತಿದ್ದರು. ಅಝರ್ ಹೊರಡುವ ಸಮಯ ಬಂದಾಗ, ಅನಿಲ್ ಕುಂಬ್ಳೆ ಯೋಗ್ಯ ಉತ್ತರಾಧಿಕಾರಿಯಾಗುತ್ತಾರೆ ಎಂದು ನಾನು ವಾದಿಸಿದೆ. ಅವರು ಉನ್ನತ ಮಟ್ಟದ ಬುದ್ಧಿವಂತಿಕೆಯನ್ನು ಹೊಂದಿದ್ದರು - ಕೇವಲ ಕ್ರಿಕೆಟ್ ಬುದ್ಧಿವಂತಿಕೆಯಲ್ಲ ಮತ್ತು ಅವರ ರಾಜ್ಯ ತಂಡವಾದ ಕರ್ನಾಟಕವನ್ನು ಪ್ರಭಾವಿ ರಣಜಿ ಟ್ರೋಫಿಗೆ ಮುನ್ನಡೆಸಿದ್ದರು. ಅಲನ್ ಡೇವಿಡ್‌ಸನ್‌ನಲ್ಲಿ ಬೆನಾಡ್ ಅವರ ಜೊತೆಯಲ್ಲಿ ವಿಕೆಟ್‌ಗಳನ್ನು ಕಬಳಿಸಲು ಮತ್ತೊಬ್ಬ ಸ್ಟ್ರೈಕ್ ಬೌಲರ್ ಇದ್ದಂತೆ ಮತ್ತು ಇಲ್ಲಿಂಗ್‌ವರ್ತ್ ಅವರು ಜಾನ್ ಸ್ನೋ ಮತ್ತು ಡೆರೆಕ್ ಅಂಡರ್‌ವುಡ್‌ನಂತಹವರನ್ನು ಹೊಂದಿದ್ದಂತೆ, ಕುಂಬ್ಳೆ ಜಾವಗಲ್ ಶ್ರೀನಾಥ್ ಮೇಲೆ ಅವಲಂಬಿತರಾಗಿದ್ದರು. ಆದ್ದರಿಂದ, ಭಾರತದ ಹಿಂದಿನ ಬೌಲರ್-ಕ್ಯಾಪ್ಟನ್ ಕಪಿಲ್ ದೇವ್ ವೃತ್ತಿಜೀವನದ ಬಹುಪಾಲು ಏಕೈಕ ಸ್ಟ್ರೈಕ್-ಬೌಲರ್ ಆಗಿದ್ದಕ್ಕಿಂತ ಭಿನ್ನವಾಗಿ, ಕುಂಬ್ಳೆಗೆ ತನ್ನ ಆಟವನ್ನು ಯಾವಾಗ ತೋರಿಸಬೇಕೆಂದು ತಿಳಿಯದೆ ಇರುವ ಸಾಧ್ಯತೆ ಕಡಿಮೆ. (ಕಪಿಲ್ ನಾಯಕನಾಗಿ ಕೆಲವು ಗಮನಾರ್ಹ ಯಶಸ್ಸನ್ನು ಹೊಂದಿದ್ದರು, ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ 1983 ಮತ್ತು 1986ರಲ್ಲಿ).
ಕಾಲು ಶತಮಾನದ ಹಿಂದೆ ಪ್ರಕಟವಾದ ಆ ಅಂಕಣದಲ್ಲಿ, ಬೌಲರ್-ಕ್ಯಾಪ್ಟನ್‌ಗಳ ವಿರುದ್ಧದ ಪೂರ್ವಗ್ರಹವು ಬೌಲರ್‌ಗಳನ್ನು ಕ್ರಿಕೆಟ್‌ನ ಕೆಳವರ್ಗದವರಂತೆ ಪರಿಗಣಿಸುವ ಸಾಮಾನ್ಯ ಪ್ರವೃತ್ತಿಯ ಭಾಗವಾಗಿದೆ ಎಂದು ನಾನು ಟೀಕಿಸಿದ್ದೆ. ಬ್ಯಾಟ್ಸ್‌ಮನ್‌ಗಳು ಆಟದ ಗ್ಲಾಮರ್ ಹುಡುಗರು. ಅಭಿಮಾನಿಗಳು ಮತ್ತು ಪ್ರಾಯೋಜಕರು ಸಮಾನವಾಗಿ ಅನುಸರಿಸುವ ಮಾಡೆಲ್‌ಗಳು. ಅದೇನೇ ಇದ್ದರೂ, ಎಲ್ಲಾ ಇತರ ವಿಷಯಗಳು ಸಮಾನವಾಗಿದ್ದರೆ ಬೌಲರ್‌ಗಳು ಉತ್ತಮ ಮತ್ತು ಯಶಸ್ವಿ ನಾಯಕರಾಗಬಹುದು ಎಂದು ಇತಿಹಾಸ ನಮಗೆ ಹೇಳುತ್ತದೆ ಎಂದು ಬರೆದಿದ್ದೆ. ಶ್ರೀನಾಥ್ ಆಟದಲ್ಲಿ ಇರುವವರೆಗೆ ಮತ್ತು ಉತ್ತಮವಾಗಿ ಬೌಲಿಂಗ್ ಮಾಡುವವರೆಗೆ, ಅನಿಲ್ ಕುಂಬ್ಳೆಯವರ ತಾಕತ್ತಿನ ಮತ್ತೊಂದು ಮಗ್ಗುಲು ಕಾಣಿಸಲಾರದು. ಸಮಯ ಬಂದಾಗ ಕರ್ನಾಟಕದ ಸ್ಪಿನ್ನರ್‌ನನ್ನು ಪರಿಗಣಿಸಲೇಬೇಕಾಗುತ್ತದೆ. ಬೌಲರ್‌ಗಳು ಪರಿಣಾಮಕಾರಿ ನಾಯಕರಾಗುವುದಿಲ್ಲ ಅಥವಾ ಆಗಬಾರದು ಎಂಬ ಸಿದ್ಧಾಂತದಿಂದ ಈ ಪರಿಗಣಿಸುವಿಕೆಯನ್ನು ನಿರಾಕರಿಸಲಾಗದು ಎಂದು ಬರೆದಿದ್ದೆ.
ಸನ್ನಿವೇಶ ಮೇಲ್ನೋಟಕ್ಕೆ ಕಾಣುವಷ್ಟು ಕೆಟ್ಟದಿಲ್ಲ ಎಂದೇ ನಾನು ಭಾವಿಸಿದ್ದೆ. ಒಂದು ವರ್ಷದ ನಂತರ, ಅಝರ್ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸಿದಾಗ, ಅವರ ಸ್ಥಾನಕ್ಕೆ ಸಚಿನ್ ತೆಂಡುಲ್ಕರ್ ಅವರನ್ನು ನೇಮಿಸಲಾಯಿತು. ಎಂಟು ಟೆಸ್ಟ್‌ಗಳ ನಂತರ, ತೆಂಡುಲ್ಕರ್ ಬದಲಿಗೆ ಗಂಗುಲಿ ಅವರನ್ನು ನೇಮಿಸಲಾಯಿತು. ಅವರು ವಿಶೇಷವಾಗಿ ತವರಿನ ಟೆಸ್ಟ್‌ಗಳಲ್ಲಿ ಯಶಸ್ವಿ ಎನ್ನಿಸಿದರು. ಅವರ ಬ್ಯಾಟಿಂಗ್ ಫಾರ್ಮ್ ಕುಸಿದಾಗ ಅವರನ್ನು ಕೈಬಿಡಲಾಯಿತು. ಆನಂತರ ರಾಹುಲ್ ದ್ರಾವಿಡ್ ಬಂದರು.
ಅಝರುದ್ದೀನ್, ನಾಯಕತ್ವದಲ್ಲಿ ಅವರ ಮೂವರು ಉತ್ತರಾಧಿಕಾರಿಗಳಾದ ತೆಂಡುಲ್ಕರ್, ಗಂಗುಲಿ ಮತ್ತು ದ್ರಾವಿಡ್ ಅವರಂತೆ ಸಹಜವಾಗಿ ಮೊದಲ ಮತ್ತು ಅಗ್ರಗಣ್ಯ ಬ್ಯಾಟರ್. ಅವರೆಲ್ಲರೂ ಪಂದ್ಯಗಳನ್ನು ಗೆಲ್ಲಲು ಅನಿಲ್ ಕುಂಬ್ಳೆ ವಿಕೆಟ್‌ಗಳನ್ನು ಪಡೆಯುವುದನ್ನೇ ಗಣನೀಯವಾಗಿ ಅವಲಂಬಿಸಿದ್ದರು. 2006ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ನಡೆದಿತ್ತು. ದ್ರಾವಿಡ್ ಅನುಪಸ್ಥಿತಿಯಲ್ಲಿ, ಕಡಿಮೆ ಅನುಭವಿ (ಮತ್ತು ಹೆಚ್ಚು ವಿಚಿತ್ರ ವರ್ತನೆಯ) ವೀರೇಂದ್ರ ಸೆಹ್ವಾಗ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಯಿತು. ಅನಿಲ್ ಕುಂಬ್ಳೆ ತಂಡದಲ್ಲಿದ್ದರೂ, ಕುಂಬ್ಳೆ ಹೆಚ್ಚಾಗಿ ಬೌಲಿಂಗ್ ಮಾಡುವವರು ಮತ್ತು ಅವರು ಹೆಚ್ಚಾಗಿ ಬ್ಯಾಟಿಂಗ್ ಮಾಡಿದವರು ಎಂಬುದು ಆ ಆಯ್ಕೆಯ ಕಾರಣವಾಗಿತ್ತು.
ಅಝರ್ ನಿವೃತ್ತರಾದ ನಂತರ 2007ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸುವ ಅವಕಾಶವನ್ನು ಪಡೆಯಲು ಅನಿಲ್ ಕುಂಬ್ಳೆ 83 ಟೆಸ್ಟ್‌ಗಳನ್ನು ಕಾಯಬೇಕಾಯಿತು. ಕುಂಬ್ಳೆ ಅವರನ್ನು ಮೊದಲೇ ನೇಮಿಸಿದ್ದರೆ...? ಏಕೆಂದರೆ ಕುಂಬ್ಳೆ ಅವರು ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯಕ್ಕಾಗಿ ತೆಂಡುಲ್ಕರ್‌ರಷ್ಟೇ ಅರ್ಹರಾಗಿದ್ದರು. ಗಂಗುಲಿಯಂತೆ ಮೈದಾನದಲ್ಲಿ ಆಕ್ರಮಣಕಾರಿಯಾಗಿದ್ದರು. ದ್ರಾವಿಡ್‌ರಂತೆ ನಿಪುಣರಾಗಿದ್ದರು. ತಂಡದ ಆಟಗಾರ ಮತ್ತು ಭಾರತದ ಕ್ಯಾಪ್ಟನ್ ಆಗಿ ಇದುವರೆಗೆ ದೇಶಕ್ಕಾಗಿ ಆಡಿದ ಯಾರೊಬ್ಬರಂತೆ ತೀವ್ರವಾಗಿ ಹೆಮ್ಮೆಪಡಬಲ್ಲಂಥವರಾಗಿದ್ದರು. ಕುಂಬ್ಳೆ ಅವರು 1999ರಲ್ಲಿ ನಾಯಕನಾಗಿದ್ದರೆ (ನಾನು ಮತ್ತು ಇತರ ಕೆಲವರು ನಿರೀಕ್ಷಿಸಿದಂತೆ), ಅವರು ಒಂದು ದಶಕದ ಉತ್ತಮ ಭಾಗದಲ್ಲಿ ಆಡಿರುತ್ತಿದ್ದರು. ಶ್ರೀನಾಥ್ ಅವರನ್ನು ಹೆಚ್ಚುವರಿ ಸ್ಟ್ರೈಕ್ ಬೌಲರ್ ಆಗಿ ಮತ್ತು ನಂತರ ಹರ್ಭಜನ್ ಸಿಂಗ್ ಮತ್ತು ಝಹೀರ್ ಖಾನ್ ಅವರ ಹೊರೆಯನ್ನು ಹಂಚಿ ಕೊಂಡಿರುತ್ತಿದ್ದರು. ಇಪ್ಪತ್ತು ವಿಕೆಟ್‌ಗಳನ್ನು ಪಡೆದು ಟೆಸ್ಟ್ ಪಂದ್ಯಗಳನ್ನು ಗೆದ್ದಿರುತ್ತಿದ್ದರು. ಪ್ರಶ್ನೆ ಸಂಪೂರ್ಣವಾಗಿ ಕಾಲ್ಪನಿಕವಾಗಿದ್ದರೂ, ಅವರು ಭಾರತದ ನಾಯಕನಾಗಿ ದೀರ್ಘ ಮತ್ತು ಸಮಂಜಸ ವಾದ ಯಶಸ್ವಿ ದಾಖಲೆಯನ್ನು ಹೊಂದಿಲ್ಲ ಎಂದು ಊಹಿಸಲು ಯಾವುದೇ ಕಾರಣವಿಲ್ಲ.
ಕುಂಬ್ಳೆ ತೀರಾ ಕಡಿಮೆ ಸಮಯವನ್ನು ಹೊಂದಿದ್ದರು. 2008ರ ಪರ್ತ್ ಟೆಸ್ಟ್‌ನ ಪ್ರಮುಖ ಅಂಶವೆಂದರೆ, 2024ರ ಪರ್ತ್ ಟೆಸ್ಟ್‌ನಂತೆ ಇತ್ತು. ಭಾರತ ಸೋಲು ಮತ್ತು ಹತಾಶೆಯತ್ತ ಹೋಗುವುದು ಕಂಡಿತು. ಅವರು ಸಿಡ್ನಿಯಲ್ಲಿ ಹಿಂದಿನ ಟೆಸ್ಟ್‌ನಲ್ಲಿ ಸೋತಿದ್ದರು. ಹೆಚ್ಚಾಗಿ ಆಘಾತಕಾರಿ ಅನ್ಯಾಯಗಳ ಸರಣಿಯೇ ಇತ್ತು. ಅಗ್ರ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ತಪ್ಪು ಅಂಪೈರಿಂಗ್ ಮೂಲಕ ಔಟ್ ಮಾಡಲಾಯಿತು. ಆದರೂ ಕುಂಬ್ಳೆ ಅವರು ಪರ್ತ್‌ನಲ್ಲಿ ಅದ್ಭುತ ಗೆಲುವಿನ ಕಡೆಗೆ ಪರಿಣಾಮಕಾರಿಯಾಗಿ ತಮ್ಮ ಅಸಮಾಧಾನಗೊಂಡ ತಂಡವನ್ನು ಮುನ್ನಡೆಸಿದ್ದರು.
ಅದು ಹದಿನಾರು ವರ್ಷಗಳ ಹಿಂದೆ.
ಈ ಬಾರಿ, ಅನಪೇಕ್ಷಿತ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಮೂರು ಸೊನ್ನೆಗಳ ಅವಮಾನಕರ ಸೋಲಿನ ನಂತರ, ಪಂಡಿತರು ಆಸ್ಟ್ರೇಲಿಯದಲ್ಲಿ ಭಾರತದ ಅವಕಾಶಗಳ ಬಗ್ಗೆ ಬರೆದಿದ್ದರು. ಅವರ ನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇಬ್ಬರೂ ನಿರ್ಣಾಯಕ ಆರಂಭಿಕ ಟೆಸ್ಟ್ ಗೆ ಗೈರುಹಾಜರಾಗಿದ್ದರು. ಭಾರತ ಮೊದಲು ಬ್ಯಾಟ್ ಮಾಡಿ 150 ರನ್‌ಗಳಿಗೆ ಔಟಾದಾಗ, ಆತಿಥೇಯರ ಕೈಯಲ್ಲಿ 4-0 ಸೋಲಿನ ಆ ಮುನ್ಸೂಚನೆಗಳು ನಿಜವಾಗುವುದು ನಿಶ್ಚಯ ಎನ್ನುವಂತೆ ಕಂಡುಬಂದಿತ್ತು. ಆನಂತರ, ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ಅದ್ಭುತವಾದ ತಿರುವಿನಲ್ಲಿ ಭಾರತದ ನಾಯಕ, ಭಾರತದ ಅತ್ಯುತ್ತಮ ಬೌಲರ್ ಕೂಡ ಆಸ್ಟ್ರೇಲಿಯದ ಬ್ಯಾಟಿಂಗ್‌ನ ಬೆನ್ನುಮೂಳೆಯನ್ನು ಮುರಿದರು. ನಂತರದ ಎರಡು ದಿನಗಳಲ್ಲಿ ಭಾರತೀಯರು ಕಮಾಂಡಿಂಗ್ ಸ್ಥಾನಕ್ಕೆ ಬ್ಯಾಟಿಂಗ್ ಮಾಡಿದರು, ಅದ್ಭುತ ಗೆಲುವಿನ ಹಾದಿಯನ್ನು ಸಿದ್ಧಪಡಿಸಿದರು.
ಪರ್ತ್‌ನ ಮೈದಾನದಲ್ಲಿ ಜಸ್‌ಪ್ರಿತ್ ಬುಮ್ರಾ ಅವರು ತಮ್ಮ ತಂಡವನ್ನು ಮುನ್ನಡೆಸಿದ ಭರವಸೆ ಮತ್ತು ಹಿಡಿತವನ್ನು ವ್ಯಾಪಕವಾಗಿ ಮೆಚ್ಚಲಾಗಿದೆ. ಪಂದ್ಯದ ಮುಕ್ತಾಯದ ಪತ್ರಿಕಾಗೋಷ್ಠಿಯಲ್ಲಿ ಅವರ ನಡವಳಿಕೆ ತುಂಬಾ ಪ್ರಭಾವಶಾಲಿಯಾಗಿತ್ತು. ಇಲ್ಲಿ, ಬುಮ್ರಾ ಅವರು ಕ್ರಿಕೆಟ್ ಆಟದ ಬಗ್ಗೆ ಮತ್ತು ಜೀವನದ ಬಗ್ಗೆ ಅಸಾಧಾರಣ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯ ವ್ಯಕ್ತಿ ಎಂಬುದನ್ನು ತೋರಿಸಿದರು. ಹಿಂದಿನ ವರ್ಷದಲ್ಲಿ, ರೋಹಿತ್ ಶರ್ಮಾ ಯಶಸ್ಸಿನ ಹೊತ್ತಲ್ಲಿ, ಕೆಲವು ಕಾಮೆಂಟೇಟರ್‌ಗಳು ಸಮಯ ಬಂದಾಗ ಅವರ ಜಾಗದಲ್ಲಿ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದ್ದರು. ರಿಷಬ್ ಪಂತ್ ಬಗ್ಗೆಯೂ ಚರ್ಚೆ ನಡೆದಿತ್ತು. ಅಂತಹ ಊಹಾಪೋಹ ಬೌಲರ್-ಕ್ಯಾಪ್ಟನ್‌ಗಳ ವಿರುದ್ಧದ ಪೂರ್ವಗ್ರಹದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿತ್ತು. ಆದರೂ, ಬುಮ್ರಾ ಪರ್ತ್ ನಲ್ಲಿ ತಂಡವನ್ನು ಮುನ್ನಡೆಸಿದ ನಂತರ, ಅವರು ಶರ್ಮಾ ಅವರ ಉತ್ತರಾಧಿಕಾರಿಯಾಗಬೇಕೆಂಬ ಬಗ್ಗೆ ಸ್ವಲ್ಪ ಸಂದೇಹವಿದೆ.
ಜನವರಿ 2008ರಲ್ಲಿ ಪರ್ತ್ ವಿಜಯದ ಸಮಯದಲ್ಲಿ, ಭಾರತದ ನಾಯಕ ಅನಿಲ್ ಕುಂಬ್ಳೆ ಅವರಿಗೆ ಮೂವತ್ತೇಳು ವರ್ಷ. ಅವರ ವೃತ್ತಿಜೀವನ ಹೆಚ್ಚು ಸಮಯ ನಡೆಯಲಿಲ್ಲ; ವಾಸ್ತವವಾಗಿ, ಅವರು ವರ್ಷಾಂತ್ಯದ ಮೊದಲು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. 2024ರಲ್ಲಿ ಪರ್ತ್ ವಿಜಯದ ಸಮಯದಲ್ಲಿ ಭಾರತದ ನಾಯಕ ಜಸ್‌ಪ್ರಿತ್ ಬುಮ್ರಾ ಅವರ ಮೂವತ್ತೊಂದನೇ ಹುಟ್ಟುಹಬ್ಬಕ್ಕೆ ಕೆಲವು ವಾರಗಳು ಬಾಕಿಯಿದ್ದವು. ರೋಹಿತ್ ಶರ್ಮಾ ಶೀಘ್ರದಲ್ಲೇ ಆಟದಿಂದ ನಿರ್ಗಮಿಸುವ ಸಾಧ್ಯತೆಯಿದೆ. ಆದರೆ, ಬುಮ್ರಾ ಅವರಿಗೆ ಇನ್ನೂ ನಾಲ್ಕು, ಬಹುಶಃ ಐದು ವರ್ಷಗಳ ಕಠಿಣ ಟೆಸ್ಟ್ ಕ್ರಿಕೆಟ್ ಇದೆ.
ಕುಂಬ್ಳೆ ಅವರು ಆಡುವಾಗ, ಅವರಂತೆಯೇ ಬುಮ್ರಾ ಕೂಡ ಭಾರತದ ಪ್ರಮುಖ ಸ್ಟ್ರೈಕ್ ಬೌಲರ್ ಆಗಿದ್ದರು. ಕುಂಬ್ಳೆ ಅವರಂತೆ ಬುಮ್ರಾ ಕೂಡ ವಿಕೆಟ್ ಕಬಳಿಸುವ ಜೊತೆಗಾರರನ್ನು ನೆಚ್ಚಿದ್ದರು. ಇವರಲ್ಲಿ ಅಶ್ವಿನ್, ಜಡೇಜಾ ಮತ್ತು ಶಮಿ ಅವರಿಗಿಂತ ಹಿರಿಯರು ಮತ್ತು ಎಲ್ಲರಿಗೂ ಬಹುಶಃ ಒಂದು ಅಥವಾ ಎರಡು ವರ್ಷಗಳಿಗಿಂತ ಹೆಚ್ಚು ಸಮಯವಿಲ್ಲ. ಆದರೂ, ಸಿರಾಜ್ ಮತ್ತು ಕುಲದೀಪ್ ಇಬ್ಬರೂ ಬುಮ್ರಾ ಅವರಿಗಿಂತ ಕಿರಿಯರಾಗಿದ್ದರೆ, ಹರ್ಷಿತ್ ರಾಣಾ ಪರ್ತ್‌ನಲ್ಲಿದ್ದಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಕಿರಿಯ ಭಾರತೀಯ ಬೌಲರ್‌ಗಳು ಛಾಪು ಮೂಡಿಸಬಹುದು. ಜಸ್‌ಪ್ರಿತ್ ಬುಮ್ರಾ ಅವರು ಇನ್ನೂ ಭಾರತದ ಅತ್ಯುತ್ತಮ ಬೌಲರ್-ಕ್ಯಾಪ್ಟನ್ ಆಗುವುದಕ್ಕೆ ಇವೆಲ್ಲವೂ ಉತ್ತಮ ಸೂಚನೆ.