Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಬದುಕಿನ ಸತ್ಯಗಳನ್ನು ಬಿಚ್ಚಿಡುವ...

ಬದುಕಿನ ಸತ್ಯಗಳನ್ನು ಬಿಚ್ಚಿಡುವ ವಾಸ್ತವವಾದಿ; ಮಾರ್ಕ್ವೆಜ್

ಲೋಕೇಶ ಬೆಕ್ಕಳಲೆಲೋಕೇಶ ಬೆಕ್ಕಳಲೆ21 Nov 2024 12:30 PM IST
share
ಬದುಕಿನ ಸತ್ಯಗಳನ್ನು ಬಿಚ್ಚಿಡುವ ವಾಸ್ತವವಾದಿ; ಮಾರ್ಕ್ವೆಜ್

ಇತ್ತೀಚೆಗೆ ಫೇಸ್‌ಬುಕ್ ಗೋಡೆಯಲ್ಲಿ ವ್ಯಕ್ತಿಯೊಬ್ಬ ತೆರೆದ ಪುಸ್ತಕವೊಂದನ್ನು ತಲೆಯ ಮೇಲೆ ಇಟ್ಟುಕೊಂಡಿದ್ದಂತಹ ಮುಖಪುಟ ಹೊಂದಿದ್ದ ಪುಸ್ತಕದ ಪೋಸ್ಟ್‌ವೊಂದನ್ನು ಗಮನಿಸಿದೆ. ಮುಖಪುಟ ಆಕರ್ಷಣೆ ಹುಟ್ಟಿಸಿತು.

ಲ್ಯಾಟಿನ್ ಅಮೆರಿಕದ ಜಗತ್ಪ್ರಸಿದ್ಧ ಕಾದಂಬರಿಕಾರ ಮಾರ್ಕ್ವೆಜ್ ತನ್ನ ಆಪ್ತ ಗೆಳೆಯ ಪ್ಲಿನಿಯೋ ಅಪುಲೆಯೋ ಮೆಂಡೋಝನ ಜೊತೆ ಸಂವಾದಿಸಿರುವ ಮಾತುಕತೆಯ ಸಂಗ್ರಹದ ‘ಫ್ರೇಗ್ರನ್ಸ್ ಆಫ್ ಗ್ವಾವ’ ಎಂಬ ಶೀರ್ಷಿಕೆಯ ಪುಸ್ತಕವದು. ಅದನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ನೋಟಕ್ಕೇ ಪ್ರೀತಿ ಹುಟ್ಟಿಸಿದ ಮೇಲೆ ಮನೆಗೆ ಕರೆಯದೇ ಇರಲು ಸಾಧ್ಯವೆ?. ಆನ್‌ಲೈನ್‌ನಲ್ಲಿಯೇ ಖರೀದಿಸಿದೆ. ಎರಡೇ ದಿನದಲ್ಲಿ ಪುಸ್ತಕ ಕೈ ಸೇರಿತು. ಕುತೂಹಲಕ್ಕೆ ಕೆಲವು ಪುಟಗಳ ತಿರುವಿದೆ. ಮತ್ತಷ್ಟು ಆಸಕ್ತಿ ಹೆಚ್ಚಿಸಿತು.

ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಮತ್ತು ಜನಪ್ರಿಯ ಲೇಖಕ. ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಮಾರ್ಕ್ವೆಜ್ ಹಳ್ಳಿಗಣ್ಣಿನ ಮಾಂತ್ರಿಕ. ಬಡಜೀವಗಳ ಬಗ್ಗೆ ಅಪಾರ ಸಹಾನುಭೂತಿ ಹೊಂದಿದ್ದ ಜೀವಪರ ಚಿಂತಕ. ಫಿಡೆಲ್ ಕ್ಯಾಸ್ಟ್ರೋನ ಗೆಳೆಯ. ಆದರೂ ಸೋವಿಯತ್ ಸರಕಾರದ ಅಥವಾ ಕಮ್ಯುನಿಸ್ಟ್ ಲೋಕವನ್ನು ಆಳುವ ನಿರುತ್ಸಾಹಿ ಅಧಿಕಾರಿಗಳ ಅಭಿಮಾನಿ ಆಗಿರಲಿಲ್ಲ. ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ದನಿ ಎತ್ತಿದ ಮಾನವತಾವಾದಿ. ಅನೇಕ ರಾಜಕೀಯ ವೈರುಧ್ಯ ಹೊಂದಿದ್ದ ತನ್ನ ನಾಡಲ್ಲೂ ಪ್ರಜಾಪ್ರಭುತ್ವವನ್ನು ಆಶಿಸಿದ್ದ ನಿರಂಕುಶವಾದಿ. ಮಾನವ ಕುಲದ ತಕ್ಷಣದ ಭವಿಷ್ಯ ಸಮಾಜವಾದದಲ್ಲಿ ಅಡಗಿದೆ ಎಂದು ಸಾರಿದ ಸಮಾಜವಾದಿ.

‘ಫ್ರೇಗ್ರನ್ಸ್ ಆಫ್ ಗ್ವಾವ’ ಕೃತಿಯಲ್ಲಿ ಮೂಲ, ಮನೆತನ, ಕೌಶಲ್ಯ, ಶಿಕ್ಷಣ, ಅಧ್ಯಯನ ಮತ್ತು ಪ್ರಭಾವ, ಕೃತಿಗಳು, ಕಾಯುವಿಕೆ, ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್, ಆಡಮ್ ಆಫ್ ದಿ ಫೇಟ್ರಿಯಾರ್ಕ್, ಈಗ, ರಾಜಕೀಯ, ಸ್ತ್ರೀಯರು, ಮೂಢನಂಬಿಕೆಗಳು, ಗೀಳುಗಳು ಮತ್ತು ಇಷ್ಟಗಳು ಹಾಗೂ ಹೆಸರು ಮತ್ತು ಪ್ರಸಿದ್ಧಿ ಎಂಬ ಹದಿನಾಲ್ಕು ಅಧ್ಯಾಯಗಳಲ್ಲಿ ಮಾರ್ಕ್ವೆಜ್ ಬದುಕು ಮತ್ತು ಬರಹ ತೆರೆದುಕೊಂಡಿದೆ. ಈ ಕೃತಿಯು ಮಾರ್ಕ್ವೆಜ್‌ನ ಮಿನಿ ಆತ್ಮಕಥನದಂತೆ ಭಾಸವಾಗುತ್ತದೆ.

ಯಾವುದೇ ಲೇಖಕ ಸೃಜನಶೀಲ ಸೃಷ್ಟಿಗೆ ತೊಡಗಿದಾಗ ಮೊದಲು ತನ್ನ ಬಾಲ್ಯದ ಕಡೆ ಮುಖ ಮಾಡುತ್ತಾನೆ ಎಂಬ ಮಾತಿದೆ. ಅದಕ್ಕೆ ಮಾರ್ಕ್ವೆಜ್ ಹೊರತಾಗೇನೂ ಇಲ್ಲ. ಮಾರ್ಕ್ವೆಜ್ ಒಬ್ಬ ಶ್ರೇಷ್ಠ ಲೇಖಕನಾಗಿ ರೂಪುಗೊಳ್ಳುವಲ್ಲಿ ಅವನ ಬಾಲ್ಯದ ಅನುಭವಗಳು ಮೂಲ ಆಸರೆಯಾಗಿವೆ. ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿ ಈ ಮಾತಿಗೆ ಸಾಕ್ಷಿಯಾಗಿದೆ. ಸ್ವತಃ ಮಾರ್ಕ್ವೆಜ್ ತನ್ನ ಪ್ರಭಾವಿಸಿದ ಬಾಲ್ಯ, ಅಜ್ಜ-ಅಜ್ಜಿ, ಮನೆಯ ಹೆಣ್ಣಾಳುಗಳು, ಗೆಳೆಯರು ಮತ್ತು ಬಾಲ್ಯದ ದಿನಗಳನ್ನು ಕಳೆದ ಅರಟಕದ ಪರಿಸರ ತನ್ನ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿರುವುದನ್ನು ಕುರಿತು ವಿವರವಾಗಿ ಹೇಳಿಕೊಂಡಿದ್ದಾನೆ.

ಮಾರ್ಕ್ವೆಜ್ ದೃಷ್ಟಿಯಲ್ಲಿ ಲೇಖಕ ಏಕಾಂಗಿ. ಲೋಕದಲ್ಲಿ ಅತ್ಯಂತ ಒಂಟಿತನ ಕಸುಬು ಬರವಣಿಗೆ. ದೃಷ್ಟಿ ಗೋಚರ ಪ್ರತಿಮೆ ಅವನ ಎಲ್ಲಾ ಕೃತಿಗಳ ತಳಹದಿಯಾಗಿದೆ. ಲೇಖಕನ ಜೀವಪರ ಮತ್ತು ಸಮಾಜಮುಖಿ ಚಿಂತನೆಗಳು ಕಥೆ, ಕಾವ್ಯ, ಕಾದಂಬರಿಗಳಿಗಷ್ಟೇ ಸೀಮಿತ ಆಗಬಾರದು ಎಂಬ ನಿಲುವು ಹೊಂದಿದ್ದನು. ಹಾಗಾಗಿ ಅದನ್ನು ನಿಜ ಬದುಕಿನಲ್ಲೂ ಹುಡುಕುವಂತಹ ಸೃಜನಶೀಲತೆ ಅವನದ್ದು. ಕಾದಂಬರಿಗಳು ವಾಸ್ತವದ ಕಾವ್ಯಾತ್ಮಕ ಸ್ಥಳಪಲ್ಲಟವಾಗಿರಬೇಕು. ‘‘ವಾಸ್ತವದ ಆಧಾರವಿಲ್ಲದ ಒಂದೇ ಒಂದು ಸಾಲು ಕೂಡ ನನ್ನ ಕಾದಂಬರಿಗಳಲ್ಲಿ ಇಲ್ಲ’’ ಎಂದು ಹೇಳಿಕೊಂಡಿರುವ ಮಾರ್ಕ್ವೆಜ್ ತನ್ನೆಲ್ಲಾ ಕೃತಿಗಳಿಗೆ ಯಾವ ನೈಜ ಘಟನೆಗಳು ಸ್ಫೂರ್ತಿ ನೀಡಿದವು ಎಂಬುದನ್ನು ಮುಕ್ತವಾಗಿ ಚರ್ಚಿಸಿದ್ದಾನೆ.

ಮಾರ್ಕ್ವೆಜ್ ಕಾದಂಬರಿಕಾರನಾಗಿ ರೂಪುಗೊಳ್ಳುವಲ್ಲಿ ಕಾಪ್ಕನ ‘ಮೆಟೋಮಾರ್ಫಿಸಿಸ್’ ಕಾದಂಬರಿಯ ಓದು ತುಂಬಾ ಪ್ರಭಾವ ಬೀರಿದ್ದನ್ನು ನೆನಪಿಸಿಕೊಂಡಿದ್ದಾನೆ. ಏಕೆಂದರೆ ಯಾವುದೇ ಸಾಹಿತಿಯ ಪ್ರಭಾವ ನಮ್ಮೊಳಗೆ ಹೊಸ ಆಲೋಚನೆ ಮತ್ತು ಲೇಖಕನೊಬ್ಬನ ಕೃತಿ ನಮ್ಮನ್ನು ಆಳವಾಗಿ ಕಲಕಿ ಲೋಕದ ಬಗೆಗಿನ ಮತ್ತು ಬದುಕಿನ ಬಗೆಗಿನ ನಮ್ಮ ಕೆಲವು ಆಲೋಚನೆಗಳನ್ನು ಮಾರ್ಪಡಿಸುತ್ತದೋ ಅದು ನಿಜವಾದ ಪ್ರಭಾವ ಮತ್ತು ಮುಖ್ಯವಾದ ಪ್ರಭಾವ ಎಂದಿದ್ದಾನೆ.

ಮಾರ್ಕ್ವೆಜ್ ಹಗಲು ಪತ್ರಕರ್ತ, ರಾತ್ರಿ ಲೇಖಕ. ಏಕೆಂದರೆ ಪ್ರಾರಂಭದ ದಿನಗಳಲ್ಲಿ ಮಾರ್ಕ್ವೆಜ್ ಹೆಚ್ಚು ಬರೆಯುತ್ತಿದ್ದದ್ದು ರಾತ್ರಿಯ ವೇಳೆಯಲ್ಲಿಯೇ. ಅದು ಇಷ್ಟಪಟ್ಟಲ್ಲ, ಬಡತನದ ಕಾರಣದಿಂದ. ಹಗಲೆಲ್ಲ ಪತ್ರಿಕೆಯಲ್ಲಿ ಸಂಪಾದಕನಾಗಿ ದುಡಿದರೆ, ರಾತ್ರಿ ಹೊತ್ತು ಅವನೊಳಗಿನ ಬರಹಗಾರ ಬರೆಯಲು ಕನವರಿಸುತ್ತಿದ್ದನು. ರಾತ್ರಿ ಮೂರು ಗಂಟೆಯವರಗೂ ತನ್ನೊಳಗಿನ ಬರಹಗಾರನ ಮಾತುಗಳಿಗೆ ದನಿಯಾಗುತ್ತಿದ್ದ ಮಾರ್ಕ್ವೆಜ್‌ಗೆ ನೆಲೆ ನಿಲ್ಲಲು ಸ್ವಂತ ಅನ್ನುವಂತಹ ತುಂಡು ಜಾಗವೂ ಇರಲಿಲ್ಲ. ವೇಶ್ಯಾವಾಟಿಕೆ ನಡೆಯುತ್ತಿದ್ದ ಹೊಟೇಲಿನ ಒಂದು ಚಿಕ್ಕ ಕೋಣೆಯಲ್ಲಿ ವಾಸವಿದ್ದನು. ದಿನ ಕಳೆದಂತೆ ಅಲ್ಲಿಯೂ ಉಳಿಯಲು ದುಡ್ಡಿಲ್ಲದೇ ಕಾದಂಬರಿಯ ಹಸ್ತಪ್ರತಿಯನ್ನು ಹೊಟೇಲಿನ ಕಾವಲುಗಾರನ ಬಳಿ ಅಡವಿಟ್ಟಿದ್ದನು.

ಮಾರ್ಕ್ವೆಜ್ ಎಂಬ ಲೇಖಕ ರಾತ್ರೋ ರಾತ್ರಿ ಬೆಳಕಿಗೆ ಬಂದವನಲ್ಲ. ಮೊದಮೊದಲು ಅವಮಾನ, ಕಷ್ಟ ಹಾಗೂ ತಿರಸ್ಕಾರವನ್ನೂ ಎದುರಿಸಬೇಕಾಯಿತು. ಅವನ ನೊಬೆಲ್ ಪ್ರಶಸ್ತಿ ವಿಜೇತ ಕೃತಿ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಗೂ ಮೊದಲು ನಾಲ್ಕು ಕಾದಂಬರಿಗಳು ಪ್ರಕಟಗೊಂಡಿದ್ದವು. ಆದರೂ ವಿಮರ್ಶಾ ಲೋಕ ಅವನನ್ನು ಲೇಖಕ ಎಂದು ಒಪ್ಪಲು ಸಿದ್ಧವಿರಲಿಲ್ಲ. ಸಹನೆ ಕಳೆದುಕೊಳ್ಳದ ಮಾರ್ಕ್ವೆಜ್ ಕಹಿಯನ್ನು ನುಂಗಿ ಬರವಣಿಗೆ ವೃತ್ತಿಯಲ್ಲಿಯೇ ಮುನ್ನಡೆದಿದ್ದ. ಕೊನೆಗೂ ಜಗತ್ತು ಅವನನ್ನು ಲೇಖಕ ಎಂದು ಅಪ್ಪಿಕೊಳ್ಳುವ ದಿನ ಬಂತು. ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿಯು ಮಾರ್ಕ್ವೆಜ್‌ನನ್ನು ಯಶಸ್ಸಿನ ಶಿಖರದ ತುತ್ತತುದಿಗೆ ತಂದು ನಿಲ್ಲಿಸಿದ್ದನ್ನು ಗೆಳೆಯನೊಂದಿಗೆ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದಾನೆ.

ಮಾರ್ಕ್ವೆಜ್ ಬರವಣಿಗೆಗೆ ತೊಡಗಿಸಿ ಕೊಂಡಿದ್ದೇ ಆಕಸ್ಮಿಕ. ಗೆಳೆಯನೊಬ್ಬನ ಸವಾಲಿಗೆ ಜವಾಬು ಕೊಡುವ ಸಲುವಾಗಿ ಬರೆಯಲು ತೊಡಗಿದವನಂತೆ. ತನ್ನ ಪೀಳಿಗೆಗೂ ಕೂಡ ಲೇಖಕನನ್ನು ಸೃಷ್ಟಿಸುವ ತಾಕತ್ತಿದೆ ಎಂಬುದನ್ನು ನಿರೂಪಿಸಬೇಕೆಂಬ ಕಿಚ್ಚು ಲೇಖನಿ ಹಿಡಿಯುವಂತೆ ಮಾಡಿತು. ಆದರೆ ಆ ಸವಾಲಿನ ಸ್ವೀಕಾರ ಅವನ ಮನೋಧೋರಣೆಯನ್ನೇ ಬದಲಾಯಿಸಿತು. ಯಾವ ಮಟ್ಟಿಗೆಂದರೆ ಈ ಲೋಕದಲ್ಲಿ ಬರೆಯುವ ಬದುಕಿಗಿಂತ ತಾನು ಇಷ್ಟ ಪಡುವುದು ಮತ್ತೊಂದಿಲ್ಲ ಅನ್ನುವ ತಿರ್ಮಾನಕ್ಕೆ ಮಾರ್ಕ್ವೆಜ್ ಬಂದಿದ್ದನು.

ಇಂದಿನ ಕಾಲಮಾನದಲ್ಲಿ ಅನ್ನಿಸಿದ್ದನ್ನು ಆ ಕ್ಷಣಕ್ಕೆ ಬರೆದು ಪ್ರಕಟಿಸುವ ಗೀಳು. ಬೆಳಗಾಗುವುದರೊಳಗೆ ಗುರುತಿಸಿಕೊಳ್ಳುವ, ಗುರತಿಸಬೇಕೆನ್ನುವ ಹೆಬ್ಬಯಕೆ. ಆದರೆ ಮಾರ್ಕ್ವೆಜ್ ಬರವಣಿಗೆಯಲ್ಲಿ ಸವೆಸಿದ ಹಾದಿ ನೋಡಿದರೆ ಅಚ್ಚರಿ ಮೂಡದೇ ಇರದು. ಹಲವು ವರ್ಷಗಳ ನಿರ್ಲಕ್ಷ್ಯವನ್ನು ಮೆಟ್ಟಿ ನಿಲ್ಲದೇ ಇರುವ ಯಾವುದೇ ವಿಚಾರದಲ್ಲಿ ಮಾರ್ಕ್ವೆಜ್‌ಗೆ ಯಾವತ್ತಿಗೂ ಆಸಕ್ತಿ ಇರಲಿಲ್ಲ. ಅವನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿಯು 19 ವರ್ಷಗಳ ನಿರ್ಲಕ್ಷ್ಯವನ್ನು ಮೆಟ್ಟಿ ಗೆದ್ದಿತ್ತು. ‘ದ ಆಟಮ್ ಆಫ್ ದ ಫೇಟ್ರಿಯಾರ್ಕ್’ ಕೃತಿಯು ಹದಿನೇಳು ವರ್ಷ ಮತ್ತು ‘ಕ್ರಾನಿಕಲ್ ಆಫ್ ಎ ಡೆತ್ ಫೋರ್ ಟೋಲ್ಡ್’ ಮೂವತ್ತು ವರ್ಷಗಳ ನಂತರ ಬರೆಸಿಕೊಂಡಿವೆ. ಅಷ್ಟು ವರ್ಷಗಳ ಕಾಲ ಮಾರ್ಕ್ವೆಜ್ ಅವುಗಳ ಕಥನಗಳನ್ನು ಮನಸ್ಸಿನೊಳಗಿಟ್ಟುಕೊಂಡು ಕಾವು ಕೊಟ್ಟಿದ್ದನು. ಕಾಯುವಿಕೆಯ ಫಲ ಅವನನ್ನು ಬಹಳ ಎತ್ತರಕ್ಕೇರಿಸಿತು.

ಕೃತಿಯಲ್ಲಿ ಗೆಳೆಯ ಮೆಂಡೋಝನ ಮಾತುಕತೆ ಯಲ್ಲಿ ಚರ್ಚಿಸಿರುವ ವಿಚಾರಗಳು ಓದುಗನಿಗೆ ಆಪ್ತವಾಗುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ.

ಒಟ್ಟಾರೆ ‘ಫ್ರೇಗ್ರನ್ಸ್ ಆಫ್ ಗ್ವಾವ’ ಕೃತಿಯು ಪ್ಲಿನಿಯೋ ಅಪುಲೆಯೋ ಮೆಂಡೋಝನು ಮಾರ್ಕ್ವೆಜ್ ಜೊತೆ ನಡೆಸಿರುವ ಒಂದು ದೀರ್ಘ ಮಾತುಕತೆಯಾಗಷ್ಟೇ ಉಳಿಯದೆ, ಸಾಹಿತ್ಯ ಮತ್ತು ಬದುಕಿನ ಅನ್ವೇಷಣೆಯಾಗಿಯೂ ಗೋಚರಿಸುತ್ತದೆ.

share
ಲೋಕೇಶ ಬೆಕ್ಕಳಲೆ
ಲೋಕೇಶ ಬೆಕ್ಕಳಲೆ
Next Story
X