Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಬೇರಿನಿಂದ ಬೆಳಕಿಗೆ

ಬೇರಿನಿಂದ ಬೆಳಕಿಗೆ

ದೇವಿಕಾ ನಾಗೇಶ್, ಮಂಗಳೂರುದೇವಿಕಾ ನಾಗೇಶ್, ಮಂಗಳೂರು20 Nov 2024 3:04 PM IST
share
ಬೇರಿನಿಂದ ಬೆಳಕಿಗೆ

‘ಒಂದು ಪುರಾತನ ನೆಲದಲ್ಲಿ’ ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅವರು ಕನ್ನಡಕ್ಕೆ ಅನುವಾದಿಸಿರುವ ಜ್ಞಾನಪೀಠ ಪ್ರಶಸ್ತಿ ಪಡೆದ ಅಮಿತಾವ್ ಘೋಷ್ ಅವರ ಇಂಗ್ಲಿಷ್ ಮೂಲದ ‘An Antique Land’ ಕೃತಿ. ಮನೋಹರ ಗ್ರಂಥ ಮಾಲೆ ಪ್ರಕಟಿಸಿರುವ 326 ಪುಟ ಗಳಿರುವ ಕಾದಂಬರಿ ಇದು. ವರ್ತಮಾನದ ತುರ್ತಿಗೆ ಅನುಗುಣವಾಗಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪತ್ರ ಹಾಗೂ ಇತರ ದಾಖಲೆಗಳನ್ನು ಆಧರಿಸಿ, ಕ್ಷೇತ್ರ ಕಾರ್ಯ ಮಾಡಿ ಜನ ಜೀವನವನ್ನು ಅಧ್ಯಯನ ಮಾಡಿ ರಚಿಸಿರುವ ಕೃತಿ ಇದು. ಹದಿಮೂರನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗಿನ ಜಗತ್ತಿನ ಪುರಾತನ ನಾಗರಿಕತೆಗಳೆರಡರ ಏಳು ಬೀಳುಗಳ ಕಿರು ಚಿತ್ರಣವಿದೆ. ಇಲ್ಲಿ ಹಿಂದೂ- ಮುಸ್ಲಿಮ್, ಯಹೂದಿ-ಮುಸ್ಲಿಮ್, ಭಾರತೀಯ-ಈಜಿಫ್ಟ್ ಒಂದರೊಳಗೊಂದು ಜೀವ ಭಾವದ ಸಂಬಂಧಗಳಾಗಿ ಹೆಣೆದುಕೊಂಡು ಬದುಕಿದ ರೀತಿ ಆಯಾಕಾಲದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ತಲ್ಲಣಗಳ ಪಕ್ಷಿ ನೋಟ ಆಪ್ತವಾಗಿ ಮೂಡಿ ಬಂದಿದೆ.

‘ಮಧ್ಯಕಾಲೀನ ಯಹೂದಿ ವರ್ತಕರ ಪತ್ರಗಳು’ ಕೈರೋದ ಪುರಾತನ ‘ಗೆನಿಝ’ ಎಂಬ ಉಗ್ರಾಣದಿಂದ ಲಭ್ಯವಾದ ಪತ್ರಗಳಿವು. ಈ ಓದು ಅಮಿತಾವ್ ಘೋಷ್ ಅವರನ್ನು ವಿಷಯದ ಆಳಕ್ಕೆ ಉಪಕ್ರಮಿಸುವಂತೆ ಮಾಡಿತ್ತು. ನಂತರ ಇದು ಇವರನ್ನು ಕಾಡಿದ ಪರಿಯಂತೂ ವಿಸ್ಮಯ ಹುಟ್ಟಿಸುವಂತಹದ್ದು. ಸಾಮಾಜಿಕ ಮಾನವ ಶಾಸ್ತ್ರಜ್ಞರಾಗಿರುವ ಅಮಿತಾವ್ ಘೋಷ್ ನಂತರ ತಮ್ಮ ಜೀವಮಾನದ ಅತ್ಯಮೂಲ್ಯ ಸಮಯವನ್ನು ಈ ಕಾದಂಬರಿಯನ್ನು ಕಟ್ಟುವ ಸಲುವಾಗಿ ಮೀಸಲಿಟ್ಟರು. ಟ್ಯೂನಿಸಿಯಗೆ ಹೋಗಿ ಅರಬಿ ಭಾಷೆ ಕಲಿತರು. ಈಜಿಫ್ಟ್‌ನ ಹಳ್ಳಿಯಲ್ಲಿ ನಿಂತು ಕ್ಷೇತ್ರ ಕಾರ್ಯ ಮಾಡಿದರು. ಇದು ತನ್ನ ಸಾಮಾಜಿಕ ಜವಾಬ್ದಾರಿ ಎನ್ನುವಂತೆ ತಳಸಮುದಾಯದವನಾದ ಬೊಮ್ಮನ ಚರಿತ್ರೆ ಅರಸಿ ತುಳುನಾಡು ಮಂಗಳೂರಿಗೂ ಬಂದರು. ಹೀಗೆ ಸಿದ್ಧವಾದ ಕಾದಂಬರಿಯನ್ನು ‘ಪಾಚಿ ಕಟ್ಟಿದ ಪಾಗಾರ’ ಕಾದಂಬರಿ ಖ್ಯಾತಿಯ ಲೇಖಕಿ ಮಿತ್ರಾ ವೆಂಕಟರಾಜ್ ಅಷ್ಟೇ ಶ್ರದ್ಧೆಯಿಂದ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ತುಳು ನಾಡಿನ ಕಡಲ ಮಕ್ಕಳ ಆರಾಧ್ಯ ದೈವ ಬೊಬ್ಬರ್ಯ. ಹಿಂದೆ ಪೂರ್ವ ಪಶ್ಚಿಮವನ್ನು ಜೋಡಿಸುವ ಸಮುದ್ರ ಯಾನದಲ್ಲಿ ಅಕಾಲ ಮರಣವನ್ನು ಅಪ್ಪಿದ ಮುಸ್ಲಿಮ್ ನಾವಿಕ ಈತ. ಕಡಲ ಮಕ್ಕಳ ಸಂರಕ್ಷಣೆಗಾಗಿ ದೈವವಾಗಿ ಮಾನ್ಯತೆ ಪಡೆದ ಬೊಬ್ಬರ್ಯ ಕಡಲ ತೀರದಲ್ಲಿ 19ನೇ ಶತಮಾನದ ಕೊನೆಯವರೆಗೂ ಕಲ್ಲು ಕಟ್ಟೆಯ ಮೇಲೆ ಮರದ ಗದೆಯ ರೂಪದಲ್ಲಿ ನೆಲೆಯಾಗಿರುವುದನ್ನು ಜನ ನಂಬುತ್ತಿದ್ದರು. ಅನಾದಿಯಿಂದಲೂ ಜಾತಿ ಶ್ರೇಣೀಕರಣ ವ್ಯವಸ್ಥೆಯನ್ನು ಶಕ್ತಿ ಬಲದಿಂದ ಎದುರಿಸುತ್ತಿದ್ದ ವ್ಯಕ್ತಿಗತ ವ್ಯಕ್ತಿ ಪರಂಪರೆಗಳು ತುಳುನಾಡಿನ ದೈವರಾಧನೆಯ ಸ್ವರೂಪ ಪಡೆದಿತ್ತು. ಇಂತಹ ಕೋಮು ಸೌಹಾರ್ದವನ್ನು ನೆಲೆಯಾಗಿಸಿ ಕೊಂಡ ಸಾವಿರಾರು ದೈವಗಳು ಈ ನೆಲದ ಹಿರಿಮೆ ಮೆರೆದಿತ್ತು. ಇಂದು ಇವು ಏಕಮುಖ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ದೇವಾಲಯಗಳ ರೂಪ ಪಡೆದುಕೊಂಡಿರುವುದನ್ನು ಅಮಿತಾವ್ ತಮ್ಮ ಕ್ಷೇತ್ರ ಕಾರ್ಯದಲ್ಲಿ ಗುರುತಿಸಿ ಸೂಕ್ಷ್ಮವಾಗಿ ಉಲ್ಲೇಖಸಿರುವುದು ಗಮನಾರ್ಹ.

‘ಒಂದು ಪುರಾತನ ನೆಲದಲ್ಲಿ’ ಕೃತಿ ಭಾರತ ಮತ್ತು ಈಜಿಪ್ಟ್‌ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.

ಅಬ್ರಹಾಂ ಬೆನ್ ಯಿಜು ಟ್ಯೂನಿಸಿಯಾದ ಯಹೂದಿ ವರ್ತಕ. ವ್ಯಾಪಾರ ಸಂಬಂಧ ತುಳುನಾಡಿನ ಕರಾವಳಿಗೆ ಬಂದು ಇಲ್ಲಿ 17 ವರ್ಷಗಳ ಕಾಲ ನೆಲೆ ನಿಂತು ಕೇರಳ ಮೂಲದ ನಾಯರ್ ಕುಟುಂಬದ ಆಶು ಎಂಬ ಮಹಿಳೆಯನ್ನು ಮದುವೆಯಾಗಿ ಮಕ್ಕಳನ್ನು ಪಡೆದ. ಬೊಮ್ಮ ಈತನ ಗುಲಾಮ. ಒಡೆಯನ ವ್ಯಾಪಾರ ವಹಿವಾಟುಗಳನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡಿದ್ದವ. ಈತನಿಗೆ ಕುಡಿತದ ಚಟವಿದ್ದರೂ ಬೆನ್ ಯಿಜು ತನ್ನ ಜೀವಿತದ ಕೊನೆಯವರೆಗೂ ಈತನನ್ನು ತನ್ನ ಜೊತೆಗಿಟ್ಟು ಕೊಂಡಿದ್ದ. ಈ ಭಾವನಾತ್ಮಕ ಬೆಸುಗೆಯ ಫಲ ಒಡೆಯ ತನ್ನ ಇಳಿ ವಯಸ್ಸಿನಲ್ಲಿ ತನ್ನ ಹುಟ್ಟೂರು ಎಡನ್‌ಗೆ ತೆರಳುವಾಗ ತನ್ನ ಮಕ್ಕಳ ಜೊತೆಗೆ ಬೊಮ್ಮನನ್ನು ಕರೆದೊಯ್ದ. ಈ ಕಾದಂಬರಿಯ ವಸ್ತು ವಿಷಯ ಸ್ಥಳಗಳ ವಿಸ್ತಾರವನ್ನು ಗಮನಿಸುವಾಗ ಇದು ಧರ್ಮ ಯುದ್ಧದಿಂದ ತೊಡಗಿ ಆಪರೇಷನ್ ಡೆಸರ್ಟ್ಸ್ ಸ್ಟೋರ್ಮ್ ಯುದ್ಧ ನಂತರದ ಬದಲಾದ ಗಲ್ಫ್ ಜಗತ್ತು ಕಂಡ ತಲ್ಲಣದ ಸಂಕ್ಷಿಪ್ತ ಚಿತ್ರಣವನ್ನು ನೀಡುತ್ತದೆ.

ಲಟೈಫ, ನಷಾವಿ ಮತ್ತು ಮಂಗಳೂರು, ಎಡನ್‌ಗಳನ್ನು ಕೇಂದ್ರವಾಗಿಸಿಕೊಂಡು ಕಾದಂಬರಿಯ ಒಟ್ಟು ಚಲನೆಯು ಉಪಕ್ರಮಿಸಿದೆ. ಆರು ಶತಮಾನಗಳ ಜನ ಜೀವನದ ನಂಬಿಕೆ, ಆಚರಣೆ, ವ್ಯಾಪಾರ, ವೈವಾಹಿಕ ಸಂಬಂಧಗಳ ಒಳನೋಟಗಳನ್ನು ತೆರೆದಿಡುತ್ತದೆ. ಇಲ್ಲಿ ನಿರೂಪಕನ ಪ್ರವೇಶದ ಕಾಲಕ್ಕೆ ಸಾಕಷ್ಟು ಜನದಟ್ಟಣೆಯಿದ್ದು ಒಂದೇ ಸೂರಿನಡಿ ಜನರು ಸಾಕುಪ್ರಾಣಿಗಳನ್ನು ಒಳಗೊಂಡಂತೆ ಒಟ್ಟಿಗೆ ಬದುಕುತ್ತಿದ್ದರು. ಇರಾನ್, ಇರಾಕ್, ಗಲ್ಫ್ ದೇಶಗಳಿಗೆ ಯುವಕರ ವಲಸೆಯಿಂದ ಭಾರತದಂತೆ ಈಜಿಪ್ಟ್ ನ ಆರ್ಥಿಕತೆ ಬದಲಾಯಿತು. ನಂತರ ಯುದ್ಧ ತಂದಿತ್ತ ವೇದನೆ ಅಸಾಧಾರಣವಾದದ್ದು. ಅಮಿತಾವ್ ಸಾಮಾಜಿಕ ಮಾನವ ಶಾಸ್ತ್ರದ ವಿದ್ಯಾರ್ಥಿಯಾಗಿ ಕಾದಂಬರಿಯೊಳಗಿನ ಒಂದು ಪಾತ್ರವಾಗಿ ಅಬು ಅಲಿ, ಶೇಕ್ ಮೂಸಾರಂತಹ ಹಿರಿ ಜೀವಗಳನ್ನು ಒಳಗೊಂಡ ಪರಿ ಅವರ ನಡುವಿನ ಅನ್ಯೋನ್ಯತೆ ವಿಶಿಷ್ಟವಾದುದು.

ಒಟ್ಟಾರೆಯಾಗಿ ಮನುಷ್ಯ ಸಂಬಂಧಗಳ ಪ್ರೀತಿಗೆ, ಬೆಸುಗೆಗೆ ನೂರು ದಾರಿಗಳು ಅಂದೂ ಇದ್ದವು, ಇಂದೂ ಇವೆ. ಆದರೆ ಕ್ಷುಲ್ಲಕ ಕಾರಣಗಳಿಂದಾಗಿ ಹುಟ್ಟಿಕೊಂಡ ಯುದ್ಧ, ಜಿದ್ದು, ಮತ್ಸರಗಳು, ಕೋಮು, ವರ್ಣ, ದ್ವೇಷಗಳ ದಳ್ಳುರಿಗಳಾಗಿ ಜಗತ್ತಿನ ಅತ್ಯುನ್ನತ ನಾಗರಿಕತೆಗಳ ನಾಶಕ್ಕೆ ಕಾರಣವಾಗಿದೆ. ಈ ವಾಸ್ತವವನ್ನು ಅರ್ಥ ಮಾಡಿಕೊಂಡಾಗ ಸಹಜೀವಿಯನ್ನು ಪ್ರೀತಿ ಕಾಳಜಿಯೊಂದಿಗೆ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಆಗ ನಮ್ಮ ಈ ಭೂಮಿಯು ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊಸ ಮೆರುಗು ಪಡೆಯುತ್ತದೆ ಎನ್ನುವ ಸೂಕ್ಷ್ಮಾವಲೋಕನಕ್ಕೆ ಈ ಕೃತಿಯ ಓದು ಭೂಮಿಕೆ ತೆರೆದಿಡುತ್ತದೆ.

share
ದೇವಿಕಾ ನಾಗೇಶ್, ಮಂಗಳೂರು
ದೇವಿಕಾ ನಾಗೇಶ್, ಮಂಗಳೂರು
Next Story
X