Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಒಳಗೊಳ್ಳುವಿಕೆಯ ಹಾದಿಯಲ್ಲಿ ‘ಚುಕ್ಕಿ...

ಒಳಗೊಳ್ಳುವಿಕೆಯ ಹಾದಿಯಲ್ಲಿ ‘ಚುಕ್ಕಿ ಗುರುತಿನ ಪ್ರಶ್ನೆಗಳು..!’

ಶುಭ ಮಂಗಳ ಪಿ.ಶುಭ ಮಂಗಳ ಪಿ.16 Nov 2024 12:14 PM IST
share
ಒಳಗೊಳ್ಳುವಿಕೆಯ ಹಾದಿಯಲ್ಲಿ ‘ಚುಕ್ಕಿ ಗುರುತಿನ ಪ್ರಶ್ನೆಗಳು..!’

ಸಾಮಾಜಿಕ ನೀತಿಗಳು ಯಾವುದೇ ದೇಶಕ್ಕೂ ತೀರಾ ಅಗತ್ಯ. ಭಾರತದಲ್ಲಿನ ಸಾಮಾಜಿಕ ನೀತಿಗಳು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವ ಮತ್ತು ಬಡತನ, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶಾಲ ವ್ಯಾಪ್ತಿಯ ಕ್ಷೇತ್ರಗಳನ್ನು ಒಳಗೊಂಡಿದೆ. ಕಳೆದ ೭೦ವರ್ಷಗಳಿಂದ ಭಾರತ ಸರಕಾರವು ಹಲವು ದಶಕಗಳಿಂದ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಒಳಗೊಳ್ಳುವಿಕೆಗಾಗಿ ಜಾರಿಗೆ ತಂದಿದೆ. ಆದರೆ ನಿರೀಕ್ಷಿತ ಪ್ರಗತಿ ಇನ್ನೂ ಸಾಧಿಸಲಾಗಿಲ್ಲ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜನ್ ಧನ್ ಯೋಜನೆ, ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ, ಸಮಗ್ರ ಶಿಕ್ಷಾ ಅಭಿಯಾನ, ಆಯುಷ್ಮಾನ್ ಭಾರತ್, ರಾಷ್ಟ್ರೀಯ ಆರೋಗ್ಯ ಮಿಷನ್ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಹಿರಿಯ ವ್ಯಕ್ತಿಗಳ ರಾಷ್ಟ್ರೀಯ ನೀತಿ, ಮಹಿಳಾ ಸಬಲೀಕರಣ ಯೋಜನೆಗಳು, ಉಜ್ವಲಾ ಯೋಜನೆ, ಮಹಿಳಾ ಇ-ಹಾತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಸ್ಕಿಲ್ ಇಂಡಿಯಾ ಮಿಷನ್ ೨೦೨೨ ರ ವೇಳೆಗೆ ೪೦೦ ಮಿಲಿಯನ್ ಜನರಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಪ್ರಶ್ನೆ ಇನ್ನೂ ಹಾಗೇ ಇದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ ಹವಾಮಾನ ಬದಲಾವಣೆಯನ್ನು ಪರಿಹರಿಸುವಾಗ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ವಿವರಿಸುತ್ತದೆ. ಯೋಜನೆಯ ಅನುಷ್ಠಾನ ಇನ್ನೂ ಸರಿಯಾಗಿಲ್ಲ. ಈ ನೀತಿಗಳ ಪರಿಣಾಮಕಾರಿತ್ವವು ಅವುಗಳ ಅನುಷ್ಠಾನ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಹಯೋಗವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಈ ಎಲ್ಲಾ ಸಮಸ್ಯೆಗಳ ಕುರಿತು ಲೇಖಕರು ಈ ಪುಸ್ತಕದಲ್ಲಿ ಚರ್ಚಿಸಿದ್ದಾರೆ.

ಭಾರತ ಒಂದು ರೀತಿಯಲ್ಲಿ ಸಾಮಾಜಿಕ ವಿಜ್ಞಾನಿಗಳಿಗೆ ಪ್ರಯೋಗ ಶಾಲೆಯಿದ್ದಂತೆ. ಇಲ್ಲಿ ಸಮಸ್ಯೆಗಳಿಗೂ ಕೊರತೆಯಿಲ್ಲ, ಸಲಹೆಗಳಿಗೂ ಕೊರತೆಯಿಲ್ಲ ಮತ್ತು ಪರಿಹಾರಕ್ಕೂ ಕೊನೆಯಿಲ್ಲ. ಕಳೆದ ೭೦ ವರ್ಷಗಳಲ್ಲಿ ದೇಶ ಸಾಕಷ್ಟು ಸಾಧಿಸಿದೆ ಮತ್ತು ಸಾಕಷ್ಟು ಕಳೆದುಕೊಂಡಿದೆ. ಈ ದೇಶದ ಅತಿ ಮುಖ್ಯ ಸಮಸ್ಯೆಯೇ ಜಾತೀಯತೆ. ನಮ್ಮಲ್ಲಿ ಪ್ರತಿಯೊಂದಕ್ಕೂ ಜಾತಿಯ ಬಣ್ಣವನ್ನು ಬಳಿಯಲಾಗುತ್ತದೆ. ಈ ಜಾತಿಯೊಂದಿಗೆ ಧರ್ಮ ಮತ್ತು ರಾಜಕೀಯ ಸೇರಿಕೊಂಡು ಈ ದೇಶವನ್ನು ಒಂದೆಡೆಯಿಂದ ನಿಧಾನವಾಗಿ ಕಿತ್ತು ತಿನ್ನಲಾಗುತ್ತದೆ.

ಉಳ್ಳವರು ಶ್ರೀಮಂತರಾಗುತ್ತಿದ್ದಾರೆ, ಬಡವರು ಅಲ್ಪಸಂಖ್ಯಾತರು ಮತ್ತಷ್ಟು ಬಡತನದಿಂದ ನರಳುತ್ತಿದ್ದಾರೆ. ಬಡತನ, ಸಾಮಾಜಿಕ ಹೊರಗುಳಿಯುವಿಕೆ, ಭ್ರಷ್ಟಾಚಾರ ಇತ್ಯಾದಿ ಎಂದಿಗೂ ಮುಗಿಯದ ಅನೇಕ ಸಮಸ್ಯೆಗಳನ್ನು ಹೊತ್ತು ಈ ದೇಶವು ಕುಂಟುತ್ತಾ ತೆವಳುತ್ತಾ ನಿಧಾನವಾಗಿ ಪ್ರಗತಿಯೆಂಬ ಮಾಯಾಜಿಂಕೆಯನ್ನು ಮುಟ್ಟಲು ಪ್ರಯತ್ನಿಸುತ್ತಿದೆ. ಇದನ್ನು ತಲುಪಲು ಈ ದೇಶಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗುತ್ತದೆ ಗೊತ್ತಿಲ್ಲ. ದೇಶದ ಒಟ್ಟು ಸಮಸ್ಯೆಗಳನ್ನು ಗಮನವಿಟ್ಟು ನೋಡಿದರೆ ದೇಶ ಹಿಮ್ಮುಖವಾಗಿ ಚಲಿಸುತ್ತಿದೆ ಎಂಬ ಸಂಶಯ ಬಾರದೇ ಇರದು. ನಾವು ಪುನಃ ೧೯೪೭ರ ಸ್ಥಿತಿಗೆ ಬರುತ್ತಿದ್ದೇವೆ ಎಂಬ ಸಂಶಯ ಎಲ್ಲರದು. ದೇಶ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುನ್ನಡೆಯಬೇಕಾದ ಸಂದರ್ಭದಲ್ಲಿ ಹಲವಾರು ಕಾರಣಗಳಿಂದ ಅದು ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ಸಮಾಜಶಾಸ್ತ್ರಜ್ಞರದು. ದುರ್ಬಲ ಆರ್ಥಿಕ ನೀತಿಗಳು, ಅಪರಾಧ, ಬಡತನ, ಅನಕ್ಷರತೆ ಇಂತಹ ಶತ್ರುಗಳು ದೇಶವನ್ನು ಶತಮಾನಗಳಿಂದ ಬಿಡುವಂತೆ ಕಾಣುತ್ತಿಲ್ಲ. ನಾವು ಸಾಮಾಜಿಕವಾಗಿ ಎಷ್ಟೇ ಮುಂದುವರಿದಿದ್ದರೂ ದೇಶದಲ್ಲಿ ಇನ್ನಷ್ಟು ಮಗದಷ್ಟು ಸಮಸ್ಯೆಗಳು ನಿರಂತರವಾಗಿ ದೇಶವಾಸಿಗಳನ್ನು ಕಾಡುತ್ತಿದೆ. ಇದರೊಂದಿಗೆ ಸದಾ ಕಾಡುವ ದುರ್ಬಲ ರಾಜಕೀಯ ನಿರ್ಧಾರಗಳು, ನಾಯಕರ ದೂರದೃಷ್ಟಿಯ ಕೊರತೆ, ಸಡಿಲ ಸಾಮಾಜಿಕ ಮತ್ತು ಆರ್ಥಿಕ ನೀತಿಗಳು ಸಹ ಸಮಸ್ಯೆಗಳು ಸದಾ ಜೀವಂತಿಕೆಯನ್ನು ಪಡೆಯಲು ಕಾರಣವಾಗುತ್ತಿವೆ ಎನ್ನಬಹುದು. ಈ ಎಲ್ಲಾ ವಿಚಾರಗಳ ಕುರಿತು ಲೇಖಕರು ಈ ಪುಸ್ತಕದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

‘ಚುಕ್ಕಿ ಗುರುತಿನ ಪ್ರಶ್ನೆಗಳು’ ಎನ್ನುವ ವಿಶಿಷ್ಟ ತಲೆಬರಹ ಹೊಂದಿರುವ ಈ ಪುಸ್ತಕವನ್ನು ಮೈಸೂರು ವಿವಿಯ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಬರೆದಿದ್ದಾರೆ. ನಂದಿತ ಪ್ರಕಾಶನ ಮೈಸೂರು, ಇದನ್ನು ಪ್ರಕಟಿಸಿದ್ದಾರೆ.

share
ಶುಭ ಮಂಗಳ ಪಿ.
ಶುಭ ಮಂಗಳ ಪಿ.
Next Story
X