ದೇಶಿ ವೆಬ್ಬ್ರೌಸರ್ ಅಭಿವೃದ್ಧಿಪಡಿಸಿ, ನಗದು ಬಹುಮಾನ ಗೆಲ್ಲಿ
Photo credit: freepik.com
ದೇಶೀಯ ಭಾರತೀಯ ವೆಬ್ ಬ್ರೌಸರ್ ಸೃಷ್ಟಿಗೆ ಸಹಾಯ ಮಾಡುವ ಡೆವಲಪರ್ಗಳಿಗೆ ಭರ್ಜರಿ ಅಂದರೆ 3.4 ಕೋಟಿ ರೂಪಾಯಿ ಬಹುಮಾನದ ಆಶ್ವಾಸನೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬುಧವಾರ ಘೋಷಿಸಿದೆ. ಆದರೆ ಇದಕ್ಕೆ ಇರುವ ಪ್ರಮುಖ ನಿಬಂಧನೆಯೆಂಧರೆ, ಈ ಸ್ಪರ್ಧೆಗೆ ಪ್ರವೇಶ ಪಡೆಯುವ ಬ್ರೌಸರ್ ಪರಿಕಲ್ಪನೆಗಳು, ಎಸ್ಎಸ್ಎಲ್ ಸರ್ಟಿಫಿಕೇಟ್ ಸೇರಿದಂತೆ ಭಾರತ ಸರ್ಕಾರದ ಡಿಜಿಟಲ್ ಸಹಿ ಪ್ರಾಧಿಕಾರ ಎನಿಸಿದ ಕಂಟ್ರೋಲರ್ ಆಫ್ ಸರ್ಟಿಫೈಯಿಂಗ್ ಅಥಾರಿಟೀಸ್ (ಸಿಸಿಎ) ಬಗ್ಗೆ ವಿಶ್ವಾಸ ಹೊಂದಿರಬೇಕು.
ಎಸ್ಎಸ್ಎಲ್ ಸರ್ಟಿಫಿಕೆಟ್ಗಳನ್ನು ಎನ್ಕ್ರಿಪ್ಟ್ ವೆಬ್ಸೈಟ್ಗಳಿಗೆ ಬಳಸಲಾಗುತ್ತದೆ ಹಾಗೂ ಇದು ವೆಬ್ಸೈಟ್ ಯಾವುದೇ ಪರಿಷ್ಕರಣೆಯಾಗುವುದಿಲ್ಲ ಅಥವಾ ದಾಳಿಗಳಿಗೆ ತುತ್ತಾಗುವುದಿಲ್ಲ ಎನ್ನುವುದನ್ನು ಬ್ರೌಸರ್ಗಳು ತಿಳಿದುಕೊಳ್ಳುವುದನ್ನು ಈ ಪ್ರಮಾಣಪತ್ರ ಖಾತರಿಪಡಿಸುತ್ತದೆ. ರೂಟ್ ಸರ್ಟಿಫೈಯಿಂಗ್ ಅಥಾರಿಟಿಗಳು ಇಂಥ ಪ್ರಮಾಣಪತ್ರವನ್ನು ನಂಬುತ್ತವೆ. ಆದರೆ ಭಾರತದಲ್ಲಿ ಗೂಗಲ್ ಕ್ರೋಮ್, ಮೊಝಿಲ್ಲಾ ಫೈರ್ಫಾಕ್ಸ್ ಮತ್ತು ಮೈಕ್ರೋಸಾಫ್ಟ್ ಎಡ್ಜ್ನಂಥ ಪ್ರಮುಖ ಬ್ರೌಸರ್ಗಳ ವಿಶ್ವಾಸ ಹೊಂದಿದ ರೂಟ್ ಸರ್ಟಿಫೈಯಿಂಗ ಅಥಾರಿಟಿ ಇಲ್ಲ.
ಇದರಿಂದಾಗಿ ಭಾರತೀಯ ಕಾನೂನಿನ ಅಡಿಯಲ್ಲಿ ಕಾನೂನಾತ್ಮಕವಾಗಿ ದೃಢಪಡಿಸುವ ರೂಟ್ ಸರ್ಟಿಫೈಯಿಂಗ್ ಅಥಾರಿಟಿಯನ್ನು ಸರ್ಕಾರ ಕಾರ್ಯಾಚರಣೆ ಮಾಡುತ್ತಿದ್ದರೂ, ಇದು ನೀಡಿದ ಪ್ರಮಾಣಪತ್ರಗಳನ್ನು ವೆಬ್ಬ್ರೌಸರ್ಗಳು ಮಾನ್ಯ ಮಾಡುವುದಿಲ್ಲ. ಈ ಕಾರಣಕ್ಕೆ ಪ್ರಮುಖ ಭಾರತ ಸರ್ಕಾರದ ಹಾಗೂ ಖಾಸಗಿ ವೆಬ್ಸೈಟ್ಗಳು ಎಸ್ಎಸ್ಎಲ್ ಪ್ರಮಾಣಪತ್ರಗಳನ್ನು ವಿದೇಶಿ ಪ್ರಮಾಣಪತ್ರ ಪ್ರಾಧಿಕಾರದಿಂದ ಪಡೆಯಬೇಕಾಗುತ್ತದೆ.