ಇನ್ನು ಮುಂದೆ ವಾಟ್ಸ್ ಆ್ಯಪ್ ನಲ್ಲಿ HD ಫೋಟೋ ಹಂಚಿಕೊಳ್ಳಬಹುದು; ಹೊಸ ಫೀಚರ್ ಪರಿಚಯಿಸಲಿರುವ ಮೆಟಾ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ವಾಟ್ಸ್ ಆ್ಯಪ್ ಚಾಟ್ ಅಪ್ಲಿಕೇಶನ್ ನಲ್ಲಿ ಹೊಸ ಫೀಚರ್ ಅನ್ನು ಮೆಟಾ ಪರಿಚಯಿಸಿದೆ. ವಾಟ್ಸ್ ಆ್ಯಪ್ ಗಳಲ್ಲಿ ಕಳುಹಿಸುವಾಗ ಫೋಟೋಗಳ ಗುಣಮಟ್ಟ ಕಡಿಮೆ ಆಗುವುದನ್ನು ತಪ್ಪಿಸಲು HD (ಹೈ ರೆಸಲ್ಯೂಸನ್) ಫೋಟೋ ಹಂಚಿಕೊಳ್ಳುವ ಫೀಚರ್ ಅನ್ನು ಮೆಟಾ ತಂದಿದೆ.
ಮುಂದಿನ ಕೆಲವು ವಾರಗಳಲ್ಲಿ ಈ ಫೀಚರ್ ವಾಟ್ಸ್ ಆ್ಯಪ್ ಬಳಕೆದಾರರ ಬಳಕೆಗೆ ಬರಲಿದೆ. ಈ ಫೀಚರ್ ಮೂಲಕ Android ಮತ್ತು iOS ಎರಡರಲ್ಲೂ ಉತ್ತಮ-ಗುಣಮಟ್ಟದ ಮತ್ತು ಹೆಚ್ಚಿನ-ರೆಸಲ್ಯೂಶನ್ ಚಿತ್ರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. WhatsApp ವೆಬ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಕೂಡಾ ಈ ಅನುಕೂಲ ಲಭ್ಯವಾಗಲಿದೆ.
ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಗುರುವಾರ ಫೇಸ್ಬುಕ್ ಪೋಸ್ಟ್ ಮೂಲಕ ಈ ಫೀಚರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಫೋಟೋ ಕಳುಹಿಸುವಾಗ ʼHDʼ ಎಂಬ ಗುರುತನ್ನು ಆಯ್ಕೆ ಮಾಡಿದರೆ, ಉತ್ತಮ ಗುಣಮಟ್ಟದಲ್ಲಿ ಫೋಟೋಗಳು ಹಂಚಿಕೆಯಾಗುತ್ತದೆ.
ಈ ಫೀಚರ್ ಮೂಲಕ ಫೋಟೋ ಕಳುಹಿಸಲು ಹೆಚ್ಚಿನ ಡೇಟಾ ಮತ್ತು ಸಂಗ್ರಹ ವ್ಯವಸ್ಥೆ ಬೇಕಾಗುತ್ತದೆ.