ಪಾನ್ 2.0 ಬರುವ ಮುನ್ನ ಕ್ಯೂಆರ್ ಕೋಡ್ ಇರುವ ಇ-ಪಾನ್ ಪಡೆಯುವುದು ಹೇಗೆ?
PC : e-PAN
ಹೊಸದಿಲ್ಲಿ: ಹೆಚ್ಚು ಸುರಕ್ಷಿತವಾದ, ಕ್ಯೂಆರ್ ಕೋಡ್ ಅನ್ನೂ ಹೊಂದಿರುವ ಪಾನ್ ಕಾರ್ಡ್ನ ಸುಧಾರಿತ ಆವೃತ್ತಿಯನ್ನು ತರುವುದಾಗಿ ಕೇಂದ್ರ ಸರಕಾರವು ಇತ್ತೀಚಿಗೆ ಪ್ರಕಟಿಸಿದೆ. ಪಾನ್ ಕಾರ್ಡ್ ಮೇಲೆ ಕ್ಯೂಆರ್ ಕೋಡ್ ಅನ್ನು 2017-18ರಲ್ಲಿಯೇ ಪರಿಚಯಿಸಲಾಗಿತ್ತಾದರೂ ಹೆಚ್ಚಿನವರು ಈ ಕೋಡ್ ಇಲ್ಲದ ಹಳೆಯ ಪಾನ್ಗಳನ್ನೇ ಬಳಸುತ್ತಿದ್ದಾರೆ.
ಅಧಿಕೃತವಾಗಿ ಪಾನ್ 2.0 ಚಾಲನೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದು,ಕ್ಯೂಆರ್ ಕೋಡ್ನೊಂದಿಗಿನ ಹೊಸ ಪಾನ್ 1.0ಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎನ್ನುವುದು ಇಲ್ಲಿದೆ.
ಪಾನ್ ಕಾರ್ಡ್ನಲ್ಲಿಯ ಕ್ಯೂಆರ್ ಕೋಡ್ನಿಂದ ಏನು ಉಪಯೋಗ?
ವಿತ್ತ ಸಚಿವಾಲಯದ ಪ್ರಕಾರ ಕ್ಯೂಆರ್ ಕೋಡ್ ಸ್ಕ್ಯಾನರ್ ಪಾನ್ ಹೊಂದಿರುವವರ ಭಾವಚಿತ್ರ, ಸಹಿ, ಹೆಸರು, ಪೋಷಕರ ಹೆಸರು ಮತು ಜನ್ಮ ದಿನಾಂಕವನ್ನು ಪರಿಶೀಲಿಸುತ್ದೆ, ಇದರಿಂದ ಭೌತಿಕ ಪಾನ್ ಕಾರ್ಡ್ನಲಿರುವ ಮಾಹಿತಿಗಳನ್ನು ದೃಢೀಕರಿಸುವುದು ಹೆಚ್ಚು ಸುಲಭವಾಗುತ್ತದೆ. ಕ್ಯೂಆರ್ ಕೋಡ್ ಹೊಂದಿರದ ನಿಮ್ಮ ಹಾಲಿ ಪಾನ್ಕಾರ್ಡ್ನ ಮಾನ್ಯತೆ ಮುಂದುವರಿಯುತ್ತದೆ. ಅಗತ್ಯವಿದ್ದವರು ಮಾತರ ಕ್ಯೂಆರ್ ಕೋಡ್ ಇರುವ ಪಾನ್ಗೆ ಅರ್ಜಿ ಸಲ್ಲಿಸಬಹುದು,ಇದು ಕಡ್ಡಾಯವಲ್ಲ.
ಕ್ಯೂಆರ್ ಕೋಡ್ ಇರುವ ಸುಧಾರಿತ ಪಾನ್ 1.0ಕ್ಕೆ ಅರ್ಜಿ ಸಲ್ಲಿಸಲು ಪಾನ್ ವಿವರಗಳು,ಪೋನ್ ನಂಬರ್ ಮತ್ತು ಆ ನಿರ್ದಿಷ್ಟ್ ಪಾನ್ ಜೊತೆ ಜೋಡಣೆಗೊಂಡಿರುವ ಇಮೇಲ್ ಐಡಿ ಅಗತ್ಯವಾಗಿರುತ್ತವೆ. ಅಪ್ಲಿಕೇಷನ್ನ ಮೂಲವನ್ನು ಅವಲಂಬಿಸಿ ಎನ್ಎಸ್ಡಿಎಲ್ ಅಥವಾ ಯುಟಿಐಐಟಿಎಸ್ಎಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿತ್ತದೆ. ಬಳಕೆದಾರರು ಕ್ಯೂಆರ್ ಕೋಡ್ನೊಂದಿಗಿನ ಇ-ಪಾನ್ ಮಾತ್ರ ಅಥವಾ ಭೌತಿಕ ಪಾನ್ ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.
ಕಳೆದೊಂದು ತಿಂಗಳಲ್ಲಿ ಪಾನ್ ವಿತರಿಸಲ್ಪಟ್ಟವರಿಗೆ ಇ-ಪಾನ್ ಡೌನ್ಲೋಡ್ ಮಾಡಿಕೊಳ್ಳಲು ಯಾವುದೇ ವೆಚ್ಚವು ತಗುಲುವುದಿಲ್ಲ,ಹಳೆಯ ಪಾನ್ಗಳನ್ನು ಹೊಂದಿದವರು ಕ್ಯೂಆರ್ ಕೋಡ್ ಇರುವ ಪಾನ್ ಪಡೆಯಲು 8.26 ರೂ.ಪಾವತಿಸಬೇಕಾಗುತ್ತದೆ. ಇದೇ ರೀತಿ ಕ್ಯೂಆರ್ ಕೋಡ್ ಇರುವ ಭೌತಿಕ ಪಾನ್ ಪಡೆಯಲು 50 ರೂ.ಪಾವತಿಸಬೇಕಾಗುತ್ತದೆ. ಕ್ಯೂಆರ್ ಕೋಡ್ ಇರುವ ಇ-ಪಾಬ್ ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಇರುತ್ತದೆ ಮತ್ತ ಹೆಚ್ಚುವರಿ ಸುರಕ್ಷತೆಗಾಗಿ ಪಾಸವರ್ಡ್ ಸಂರಕ್ಷಿತವಾಗಿರುತ್ತದೆ.
ಪಾನ್ಗಾಗಿ ನಿಮ್ಮ ಅಪ್ಲಿಕೇಷನ್ ಮೂಲದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ಎನ್ಸ್ಡಿಎಲ್ ಅಥವಾ ಯುಟಿಐಐಟಿಎಸ್ಎಲ್ ವೆಬ್ಸೈಟ್ಗೆ ತೆರಳಿ ಪ್ರಾಥಮಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ. ಸೈಟ್ ನಿಮ್ಮನ್ನು ನೀವು ಕ್ಯೂಆರ್ ಕೋಡ್ ಇರುವ ಇ-ಪಾನ್ ಅಥವಾ ಪಾನ್ ಪಡೆಯಬಹುದಾದ ನಿರ್ದಿಷ್ಟ ಮೂಲಕ್ಕೆ ಮರು ನಿರ್ದೇಶಿಸುತ್ತದೆ.