ಜಾಹೀರಾತು ಆದಾಯ ಯೋಜನೆಗೆ ತಿದ್ದುಪಡಿ ತಂದ ಮಸ್ಕ್: ಏನಿದರ ಅರ್ಥ?
ಎಲಾನ್ ಮಸ್ಕ್ (PTI)
ವೆರಿಫೈಡ್ ಕ್ರಿಯೇಟರ್ಗಳ ಪಾವತಿ ಒಂದು ಲಕ್ಷ ಕೋಟಿ ಡಾಲರ್ ದಾಟುವವರೆಗೂ ಅವರ ಬಳಿಯಿಂದ ಏನನ್ನೂ ಕಡಿತದ ರೂಪದಲ್ಲಿ ಪಡೆಯದಿರಲು ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿತ್ತು) ನಿರ್ಧರಿಸಿದ್ದಾಗಿ ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ. ಎಲ್ಲ ಅರ್ಹ ಸೃಷ್ಟಿಕರ್ತರಿಗಾಗಿ ಇತ್ತೀಚೆಗೆ ಎಕ್ಸ್ ಜಾಹೀರಾತು ಆದಾಯ ಹಂಚಿಕೆ ಯೋಜನೆಯನ್ನು ಪ್ರಕಟಿಸಿದ್ದು, ಒಂದು ವರ್ಷದ ವರೆಗೆ ಪ್ಲಾಟ್ಫಾರಂ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಬಳಿಕ ಶೇಕಡ 10ರಷ್ಟು ಕಡಿತ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಂದರೆ ಎಕ್ಸ್ ನೀತಿಯಲ್ಲಿ ಬದಲಾವಣೆಯಾಗಿದ್ದು, ಇದರ ಅನ್ವಯ ಪಾವತಿ ಮೇಲೆ ಹೇಳಿದ ಮಟ್ಟವನ್ನು ಮೀರಿಲ್ಲ ಎಂದಾದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಆ ಬಳಿಕ ಶೇಕಡ 10ರಷ್ಟನ್ನು ನೀಡಬೇಕಾಗುತ್ತದೆ. ಆದರೆ ಮೊದಲ 12 ತಿಂಗಳು ಎಲ್ಲರಿಗೂ ಈ ಉಚಿತ ಸೌಲಭ್ಯ ಇರುತ್ತದೆ.
ಕ್ರಿಯೇಟರ್ ಗಳು ಗರಿಷ್ಠ ಪಡೆಯುವಂತೆ ಮಾಡುವ ಸಲುವಾಗಿ ಇದನ್ನು ಶೇಕಡ 30ಕ್ಕೆ ಹೊಂದಿಸಲು ಸಾಧ್ಯವಾಗುವಂತೆ ಆ್ಯಪಲ್ ಸಿಇಒ ಟಿಮ್ ಕುಕ್ ಜತೆಗೂ ಮಾತನಾಡುವುದಾಗಿ ಅವರು ಹೇಳಿದ್ದಾರೆ.
ಒಟ್ಟು ಜಾಹೀರಾತು ಆದಾಯದಲ್ಲಿ ವೆರಿಫೈಡ್ ಕ್ರಿಯೆಟರ್ಗಳು ಪಡೆಯುವ ಪಾಲನ್ನು ಅವರು ಮಾಡುವ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆ ಆಧಾರದಲ್ಲಿ ನೀಡಲು ಕಳೆದ ವಾರ ಎಕ್ಸ್ ಆರಂಭಿಸಿತ್ತು. ಮುಖ್ಯ ಟೈಮ್ಲೈನ್ನಲ್ಲಿ ನೀಡಿದ ಜಾಹೀರಾತಿನ ಬದಲಾಗಿ, ಸೃಷ್ಟಿಕರ್ತರು ಮಾಡಿದ ಪೋಸ್ಟ್ ಗಳಿಗೆ ಪಡೆಯುವ ಪ್ರತಿಕ್ರಿಯೆ ಆಧಾರದಲ್ಲಿ ಜಾಹೀರಾತು ಆದಾಯ ಹಂಚಿಕೆ ಮಾಡಲಾಗುತ್ತದೆ.
ಎಕ್ಸ್ ನ ಬ್ಲಾಗ್ ಪೋಸ್ಟ್ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 500ಕ್ಕಿಂತ ಅಧಿಕ ಅನುಯಾಯಿಗಳು ಮತ್ತು 15 ಲಕ್ಷ ಇಂಪ್ರೆಷನ್ ಬ್ಲೂ ಗ್ರಾಹಕರು ಮತ್ತು ದೃಢೀಕೃತ ಸಂಸ್ಥೆಗಳು ಈ ಆದಾಯದ ಪಾಲಿಗೆ ಅರ್ಹರಾಗಿರುತ್ತಾರೆ. ಅರ್ಹ ಬಳಕೆದಾರು ತಮ್ಮ ಆ್ಯಪ್ ಸೆಟ್ಟಿಂಗ್ನಲ್ಲಿ ಮೊನೆಟೈಸೇಷನ್ ಸೆಕ್ಷನ್ನಲ್ಲಿ ಅಗತ್ಯ ಸೆಟ್ಟಿಂಗ್ ಬದಲಾವಣೆ ಮಾಡಿಕೊಳ್ಳಬೇಕು. ಸ್ಟ್ರೈಪ್ ಮೂಲಕ ಎಕ್ಸ್ ಪಾವತಿ ಪ್ರಕ್ರಿಯೆ ನಡೆಸುತ್ತದೆ ಹಾಗೂ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತದೆ.