ಕಾರ್ಕಳ: ಪುರಸಭೆಯ ಮುಂಭಾಗದಲ್ಲೇ ಹೊಂಡಮಯವಾದ ರಸ್ತೆ; ಅಧಿಕಾರಿಗಳ ಮೌನದ ಬಗ್ಗೆ ಸಾರ್ವಜನಿಕರ ಅಸಮಾಧಾನ
ಕಾರ್ಕಳ: ಪುರಸಭೆಯ ಮುಂಭಾಗದಲ್ಲೇ ಮಳೆ ನೀರು ನಿಂತು ರಸ್ತೆ ಹೊಂಡಮಯವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಾರ್ಕಳ ಪುರಸಭೆಯ ಎದುರುಗಡೆ ವಾಹನ ನಿಲ್ಲಿಸಬೇಕಾದರೆ 'ಬೋಟ್' ವ್ಯವಸ್ಥೆ ಕಲ್ಪಿಸಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ .ಇಲ್ಲಿ ರಸ್ತೆಗೆ ತಾಗಿಕೊಂಡಂತೆ ನೀರು ನಿಂತು ಸಣ್ಣ ತೋಡು ನಿರ್ಮಾಣವಾಗಿದೆ.ಈ ಕುರಿತಾಗಿ ಪುರಸಭಾ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಂಬಂಧಪಟ್ಟವರು ಮೌನ ವಹಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜನಸಂಚಾರವಿರುವ ರಸ್ತೆಯ ಬದಿಯಲ್ಲಿ ಅಷ್ಟೊಂದು ದೊಡ್ಡ ಹೊಂಡ ನಿರ್ಮಾಣವಾದರೂ, ದಿನ ನಿತ್ಯ ಇಲ್ಲೇ ವಾಹನ ಪಾರ್ಕಿಂಗ್ ಮಾಡುವ ಪುರಸಭಾ ಸದಸ್ಯರು, ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯ ರಸ್ತೆಯಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾದರೆ ಉಳಿದ ಕಡೆಗಳಲ್ಲಿ ಕತೆಯೇನು ಎಂದು ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
Next Story