ಬಲ ಪ್ರದರ್ಶನದ ನಂತರ ಶಾಸಕರನ್ನು ಹೊಟೇಲ್ ಗೆ ಕರೆದೊಯ್ದ ಅಜಿತ್ ಪವಾರ್ ಪಾಳಯ
Photo:Twitter@NDTV
ಹೊಸದಿಲ್ಲಿ: ಎನ್ ಸಿಪಿಯ ಶರದ್ ಪವಾರ್ ಹಾಗೂ ಬಂಡಾಯ ಸಾರಿರುವ ಅಜಿತ್ ಪವಾರ್ ಅವರ ಎರಡು ಮೆಗಾ ಸಭೆಗಳ ನಂತರ, ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿನ ಹೋರಾಟ ಈಗ ಚುನಾವಣಾ ಆಯೋಗದ ಬಾಗಿಲನ್ನು ತಲುಪಿದೆ. ಪಕ್ಷದ ಬಹುಪಾಲು ಶಾಸಕರ ಬೆಂಬಲ ತಮಗೆ ಇದೆ ಎಂದು ಅಜಿತ್ ಪವಾರ್ ಪಾಳಯ ಚುನಾವಣಾ ಆಯೋಗದ ಮೊರೆ ಹೋಗಿತ್ತು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು 40 ಶಾಸಕರು, ಎಂಎಲ್ಸಿಗಳು ಹಾಗೂ ಸಂಸದರ ಬೆಂಬಲದೊಂದಿಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಹಕ್ಕು ಮಂಡಿಸಿದ್ದಾರೆ.
ಅಜಿತ್ ಪವಾರ್ ಬಣದ ಭಾಗದ ಎಲ್ಲಾ ಶಾಸಕರನ್ನು ಮುಂಬೈ ಹೋಟೆಲ್ ನಲ್ಲಿ ಇರಿಸಲಾಗಿದೆ, ಅವರ ಸಹಿ ಮಾಡಿದ ಅಫಿಡವಿಟ್ ಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.
ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರುವ ಮೊದಲು ಜೂನ್ 30 ರಂದು ಪಕ್ಷದ ಅಧ್ಯಕ್ಷರಾಗಿ ಅಜಿತ್ ಪವಾರ್ ಅವರನ್ನು ಹೆಸರಿಸಿದ್ದೇವೆ ಎಂದು ಬಂಡಾಯ ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
Next Story